ನಟಿಸಿರುವುದು ಕೆಲವೇ ಚಿತ್ರಗಳಾದರೂ ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು ಶನೀಲ್ ಗೌತಮ್. "ಸು ್ರಮ್ ಸೋ' ಚಿತ್ರದ ಸೂಪರ್ ಸಕ್ಸಸ್ ಬಳಿಕ ಅವರು "ರವಿ ಅಣ್ಣ'ನಾಗಿಯೇ ಜನರಿಗೆ ಚಿರಪರಿಚಿತರು. ಕಲಾವಿದರಿಗೆ ಸಾಮಾನ್ಯವಾಗಿ ಒಂದು ಯಶಸ್ಸು ಸಿಕ್ಕ ತಕ್ಷಣ ಅವಕಾಶಗಳು ಹೆಚ್ಚಿ, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ, ಶನೀಲ್ ಈ ವಿಷಯದಲ್ಲಿ ತುಂಬ ಎಚ್ಚರ ವಹಿಸಿದ್ದಾರೆ. 2025ರ ಜು. 25ಕ್ಕೆ "ಸು ಫ್ರಮ್ ಸೋ' ಬಿಡುಗಡೆಯಾಗಿ ಒಂದು ವರ್ಷವಾಗಲಿದ್ದು, ಈ ಅವಧಿಯಲ್ಲಿ ಬರೋಬ್ಬರಿ 69 ಕಥೆಗಳನ್ನು ಕೇಳಿದ್ದು, 13 ಕಥೆಗಳನ್ನು ಓಕೆ ಮಾಡಿದ್ದಾರಂತೆ. ಸದ್ಯ "ಶ್ರೀರಾಮಚಂದ್ರ' ಎಂಬ ಚಿತ್ರದಲ್ಲಿ ಬಿಜಿಯಿರುವ ಅವರು, "ಒಳ್ಳೆ ಸಿನಿಮಾನೇ ಮಾಡಬೇಕು ಎಂಬುದು ನನ್ನ ಉದ್ದೇಶ. ಹೀಗಾಗಿಯೇ "ಸು ಫ್ರಮ್ ಸೋ ಬಳಿಕ ಮತ್ತೆ ಜನ "ರವಿ ಅಣ್ಣ'ನಂತೆಯೇ ನೆನಪಿನಲ್ಲಿಟ್ಟುಕೊಳ್ಳುವಂತಹ ಪಾತ್ರದಲ್ಲಿ ನಟಿಸಬೇಕು ಅಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ. ಸಿನಿಮಾ ಆಗಲು ಎಲ್ಲವೂ ಕೂಡಿ ಬರಬೇಕು, ದೇವರ ದಯೆಯೂ ಇರಬೇಕು. "ಶ್ರೀರಾಮಚಂದ್ರ'ದಲ್ಲಿ ನಟನೆಯ ಜತೆಗೆ ಕಥೆಯಲ್ಲೂ ಆರು ತಿಂಗಳು ಕೆಲಸ ಮಾಡಿದ್ದೇನೆ. ಈಗಾಗಲೇ ಶೇಕಡಾ 25ರಷ್ಟು ಶೂಟಿಂಗ್ ಆಗಿದೆ. ಇನ್ನು ಮೂರು ತಿಂಗಳಲ್ಲಿ ಚಿತ್ರೀಕರಣ ಮುಗಿಯಲಿದೆ. 2027ರಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, "ಸು ್ರಮ್ ಸೋ'ದಂತೆಯೇ ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರವಿದು. ಎಮೋಷನಲ್ ಮತ್ತು ಕಾಮಿಡಿ ಅಂಶಗಳಿರಲಿದ್ದು, ಥಿಯೇಟರ್ನಿಂದ ಹೊರಬಂದಾಗಲೂ ಕಾಡುವ ಚಿತ್ರವಾಗಲಿದೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ.