ನಿಮಗೆ ವಯಸ್ಸಾಗುತ್ತಿದೆಯೇ? ಹಾಗಿದ್ದರೆ ವಿಟಮಿನ್​-ಡಿಯಿಂದಲೂ ತಿಳಿಯಬಹುದು ಭವಿಷ್ಯ..!

Vitamin D
Published on

ವಾಷಿಂಗ್ಟನ್​: ನಿಮಗೆ ವಯಸ್ಸಾಗುತ್ತಿದೆಯೇ? ಮುಂದೇನಾದರೂ ಕಾಯಿಲೆ ಬಂದೀತು ಎಂಬ ಆತಂಕ ಕಾಡುತ್ತಿದೆಯೇ? ಹೆಲ್ತ್​ ರಿಸ್ಕ್​ ತಿಳಿಯಬೇಕು ಎಂಬ ಆಸಕ್ತಿ ಇದೆಯೇ?


ಹಾಗಿದ್ದರೆ ನಿಮ್ಮಲ್ಲಿರುವ ವಿಟಮಿನ್​-ಡಿ ಇದಕ್ಕೆ ಉತ್ತರ ನೀಡಬಲ್ಲದು. ಏಕೆಂದರೆ ಮನುಷ್ಯನ ರಕ್ತದಲ್ಲಿರುವ ವಿಟಮಿನ್​-ಡಿಯಿಂದ ಮುಂದಿನ ಆರೋಗ್ಯ-ಅನಾರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು ಎಂಬುದನ್ನು ಅಧ್ಯಯನವೊಂದು ಕಂಡುಕೊಂಡಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ವಯಸ್ಸಾದವರಲ್ಲಿ ವಿಟಮಿನ್​-ಡಿ ಕೊರತೆ ಸಾಮಾನ್ಯ. ವಿಟಮಿನ್​-ಡಿ ಕೊರತೆ ಇರುವವರಲ್ಲಿ ಹೃದ್ರೋಗ, ಕ್ಯಾನ್ಸರ್​ ಹಾಗೂ ಆಸ್ಟಿಯೋಪೋರೋಸಿಸ್​ ಸಾಧ್ಯತೆ ಹೆಚ್ಚು. ಅಲ್ಲದೆ ಡಿ ಜೀವಸತ್ವ ದೇಹದಲ್ಲಿ ನಾನಾ ರೂಪದಲ್ಲಿ ಇರುತ್ತದೆ. ಆದರೆ ರಕ್ತಪರಿಚಲನೆಯಲ್ಲಿ ಕಂಡುಬರುವ ವಿಟಮಿನ್​-ಡಿ ಪರೀಕ್ಷೆಯಿಂದ ಸಾಕಷ್ಟು ಅನಾರೋಗ್ಯಗಳ ಕುರಿತು ಮುನ್ಸೂಚನೆ ಪಡೆಯಬಹುದು ಎಂಬುದನ್ನು ಬೆಲ್ಜಿಯಮ್​​ನ ಯುನಿವರ್ಸಿಟಿ ಹಾಸ್ಪಿಟಲ್ಸ್ ಲ್ಯೂವನ್​ನ ಡಾ. ಲೀನ್​ ಆಂಟೋನಿಯೊ ಕಂಡುಕೊಂಡಿದ್ದಾರೆ. ಯುರೋಪಿಯನ್​ ಮೇಲ್​ ಏಜಿಂಗ್ ಸ್ಟಡಿ ಡೇಟಾ ಆಧರಿತ ಅಧ್ಯಯನ ಮೂಲಕ ಅವರು ಇದನ್ನು ಅರಿತುಕೊಂಡಿದ್ದು, ಈ ಕುರಿತು ಮತ್ತಷ್ಟು ಅಧ್ಯಯನದಲ್ಲಿ ತೊಡಗಿದ್ದಾರಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net