ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಒಪ್ಪಂದಕ್ಕೆ ಸಹಿ

Published on

ಬೆಂಗಳೂರು:
ಕೆ.ಆರ್.ಪುರಂನಲ್ಲಿರುವ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ಮತ್ತು ಬೀಟಾ ಸಿಎಇ ಸಿಸ್ಟಮ್ಸ್
ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳು ಪರಸ್ಪರ ಸಹಕಾರ ಮತ್ತು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯಮಕ್ಕೆ ತಕ್ಕಂತೆ ಸಿದ್ದಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು.
ಕೇಂಬ್ರಿಡ್ಜ್ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಡಿ.ಕೆ.ಮೋಹನ್ ಮತ್ತು ಬೀಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಿಇಒ ಸ್ಟವ್ರೋಸ್ ಕ್ಲಿಡಾರಿಯಸ್ ಈ ಒಡಂಬಡಿಕೆಗೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಸಮೂಹ ವಿದ್ಯಾಸಂಸ್ಥೆಗಳ ಸಿಇಒ ನಿತಿನ್ ಮೋಹನ್ ಮತ್ತು ಬೀಟಾ ಸಿಎಇ ಸಿಸ್ಟಮ್ಸ್ ಸಂಸ್ಥೆಯ ವ್ಯಾಪಾರ ವಿಭಾಗದ ಮುಖ್ಯಸ್ಥ ಲೋಕೇಶ್ ಎಸ್ ಬೊಮ್ಮಾನಿ, ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜಿ. ಇಂದುಮತಿ, ಶೈಕ್ಷಣಿಕ ಸಲಹೆಗಾರರಾದ ಡಾ. ಕೆ.ಎನ್. ಬಾಲಸುಬ್ರಮಣ್ಯಮೂರ್ತಿ ಉಪಸ್ಥಿತರಿದ್ದರು.
ಈ ಒಡಂಬಡಿಕೆಯು ಎರಡು ಸಂಸ್ಥೆಗಳ ಮಧ್ಯೆ ಪರಸ್ಪರ ಸಹಕಾರ ಮತ್ತು ಬೀಟಾ ಸಂಸ್ಥೆಯ ತರಬೇತಿ ಕೇಂದ್ರವನ್ನು ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತೆರೆದು, ಇಲ್ಲಿನ ಬೋಧಕ ಸಿಬ್ಬಂದಿಗೆ ಇಅಉ ಞ; ಊಉಯ ನವೀನ ತಂತ್ರಜ್ಞಾನವನ್ನು ಅರಿಯಲು ಮತ್ತು ವಿಧ್ಯಾರ್ಥಿಗಳಿಗೆ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಕಲಿಯಲು ಸಹಾಯ ಮಾಡಲಾಗುತ್ತದೆ. ವಿಧ್ಯಾರ್ಥಿಗಳಿಗೆ ಅಗತ್ಯವಿರುವ ಕೌಶಲ್ಯ ಮತ್ತು ತರಬೇತಿ ನೀಡಿ, ಏರೋಸ್ಪೇಸ್ ಮತ್ತು ಆಟೋಮೊಬೈಲ್ ಉಧ್ಯಮಕ್ಕೆ ಬೇಕಾದಂತೆ ತಯಾರು ಮಾಡಲಾಗುತ್ತದೆ. ಅದಕ್ಕೆಂದೇ
ಸಂಪೂರ್ಣ ಸುಸಜ್ಜಿತ ತರಬೇತಿ ಕೇಂದ್ರವನ್ನು ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತೆರೆಯಲಾಗಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ, ಇಂಟರ್ನ್‌ಶಿಪ್‌ನೊಂದಿಗೆ ಪ್ರಾಜೆಕ್ಟ್‌ಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net