ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಬೇಡ

skp 1
ಶಿಕಾರಿಪುರದ ಕುಮದ್ವತಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಜಿ.ಕೆ.ಹೆಬ್ಬಾರ್ ಉದ್ಘಾಟಿಸಿದರು. ವಿಶ್ವನಾಥ್, ವೀರೇಂದ್ರ, ಸಿದ್ದೇಶ್ವರ, ಪ್ರಶಾಂತ್ ಕುಬುಸದ್ ಇತರರಿದ್ದರು.
Published on

ಶಿಕಾರಿಪುರ: ಆತ್ಮವಿಶ್ವಾಸ ಸದೃಢವಾಗಿದ್ದರೆ ಅದು ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ನಿಮ್ಮ ಗುರಿ ಉನ್ನತ ಮಟ್ಟದಲ್ಲಿರಲಿ ಎಂದು ಕುಮದ್ವತಿ ಪ್ರೌಢಶಾಲೆ ಪ್ರಾಚಾರ್ಯ ವಿಶ್ವನಾಥ್ ಹೇಳಿದರು.

ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸರಸ್ವತಿ ಪೂಜೆ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರೀಕ್ಷೆ ಎಂಬ ಆತಂಕ, ಭಯ ಬೇಡ. ಅಭ್ಯಾಸ ಮತ್ತು ಸಾಧನೆಯಿಂದ ಮಾತ್ರ ವಿದ್ಯೆ ನಿಮ್ಮ ಸ್ವತ್ತಾಗುತ್ತದೆ ಎಂದರು.

ದೌರ್ಬಲ್ಯಗಳನ್ನು ದೂರವಿಟ್ಟು ಪರೀಕ್ಷೆ ಎದುರಿಸಲು ತಯಾರಿ ನಡೆಸಿದರೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಳ್ಳಬೇಕು. ಯಾರೂ ಕದಿಯಲಾರದ ವಸ್ತು ಎಂದರೆ ಜ್ಞಾನ. ಅದನ್ನು ಸಂಪಾದಿಸುವ ಕಡೆಗೆ ನಾವು ವಿದ್ಯಾರ್ಥಿ ದಿಸೆಯಲ್ಲೇ ಗಮನಹರಿಸಬೇಕು. ವಿದ್ಯಾರ್ಥಿ ಜೀವನ ಎಂದರೆ ಅದು ಬಂಗಾರದ ಸಮಯ. ಗುರಿ ಮುಟ್ಟುವ ಸಮಯ, ಯಶಸ್ಸನ್ನು ಗಳಿಸಿಕೊಳ್ಳುವ ಸಮಯ ಎಂದು ಹೇಳಿದರು.

ಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡುವುದು ಈ ಶಾಲೆಯ ಉದ್ದೇಶ ಎಂದು ತಿಳಿಸಿದರು.

ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ಪ್ರಾಚಾರ್ಯ ವೀರೇಂದ್ರ, ಹಿರಿಯ ಶಿಕ್ಷಕಿ ರೇಷ್ಮಾ ಬಾನು, ಕೆಆರ್‌ಸಿಎಸ್ ಪ್ರಾಚಾರ್ಯ ಸಿದ್ದೇಶ್ವರ, ಪ್ರಭಾರ ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ, ಪತ್ರಕರ್ತ ಜಿ.ಕೆ.ಹೆಬ್ಬಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net