ವಲಯ ಮಟ್ಟದ ಕ್ರೀಡಾಕುಟದಲ್ಲಿ ವಿದ್ಯಾರ್ಥಿಗಳ ಸಾಧನೆ

29_Hampapura_School Sports_1
ಎಚ್.ಡಿ.ಕೋಟೆ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಹಂಪಾಪುರ ಹೋಬಳಿಯ ಹಂಪಾಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ಸುರೇಶ್, ಎ.ಎಂ.ಪ್ರಸಾದ್ ಮೂರ್ತಿ, ನಟರಾಜು, ರಾಘವೇಂದ್ರ, ಪ್ರಕಾಶ್, ಪದ್ಮಾ, ರೇಖಾ ಇತರರಿದ್ದರು.
Published on

ಹಂಪಾಪುರ: ಎಚ್.ಡಿ.ಕೋಟೆ ತಾಲೂಕು ಹಂಪಾಪುರ ಹೋಬಳಿಯ ಹಂಪಾಪುರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವು ಇತ್ತೀಚೆಗೆ ಎಚ್.ಡಿ.ಕೋಟೆ ತಾಲೂಕು ಕ್ರೀಡಾಂಗಣದಲ್ಲಿ ನಡೆದು, ಕಂಚಮಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಗುಂಪು ಆಟದಲ್ಲಿ ಬಾಲಕಿಯರ ಖೋ ಖೋ ಪ್ರಥಮ, ಬಾಲಕರ ವಾಲಿಬಾಲ್ ದ್ವಿತೀಯ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಆಶಾ 200 ಮೀ. ಓಟ ಪ್ರಥಮ, 1500 ಮೀ.ಓಟ ಪ್ರಥಮ, 4ಗಿ100 ರಿಲೇ ಪ್ರಥಮ ಮತ್ತು ಎತ್ತರ ಜಿಗಿತ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್‌ಷಿಪ್ ಪಡೆದಿರುತ್ತಾಳೆ. ಶಾಂಭವಿ 400 ಮೀ.ಓಟ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, 4ಗಿ100 ಪ್ರಥಮ. ಆರ್.ಸಿಂಚನಾ 800 ಮೀ ಪ್ರಥಮ, 4ಗಿ100 ರಿಲೇ ಪ್ರಥಮ, ಭವಾನಿ 100 ಮೀ ದ್ವೀತಿಯ, 4ಗಿ100 ರಿಲೇ ಪ್ರಥಮ, ಕೆಂಡಗಣ್ಣಸ್ವಾಮಿ 200 ಮೀ.ಓಟ ದ್ವಿತೀಯ, ಎತ್ತರ ಜಿಗಿತ ದ್ವಿತೀಯ, ಸಿದ್ದೇಶ್ 400 ಮೀ.ಓಟ ದ್ವಿತೀಯ, ಅಜಯ್ ಎಚ್.ಆರ್., 3000 ಮೀ. ಓಟ ದ್ವಿತೀಯ, ಸಿದ್ದರಾಮ ತ್ರಿವಿಧ ಜಿಗಿತ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯಶಿಕ್ಷಕ ಸುರೇಶ್ ಅಭಿನಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎ.ಎಂ.ಪ್ರಸಾದ್ ಮೂರ್ತಿ, ಸಹ ಶಿಕ್ಷಕರಾದ ನಟರಾಜು, ರಾಘವೇಂದ್ರ, ಪ್ರಕಾಶ್, ಪದ್ಮಾ, ರೇಖಾ ಹಾಗೂ ದ್ವಿತೀಯ ದರ್ಜೆ ಸಹಾಯಕ ಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net