ವಿದ್ಯಾರ್ಥಿಗಳಿಗೆ ಬ್ಯಾಂಕಿಗ್ ವ್ಯವಹಾರ ಜ್ಞಾನ ಅವಶ್ಯ

sahyadri
ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಪ್ರೊ. ಎನ್.ರಾಜೇಶ್ವರಿ ಉದ್ಘಾಟಿಸಿದರು. ಡಾ. ಪರಿಸರ ನಾಗರಾಜ್, ಹನುಮಂತಪ್ಪ, ಬಿ.ಆರ್.ಶಂಕರಪ್ಪ, ಪ್ರೊ. ಹಾ.ಮ.ಮಲ್ಲಿಕಾರ್ಜುನ ಇತರರಿದ್ದರು.
Published on

ಶಿವಮೊಗ್ಗ: ವಿದ್ಯಾರ್ಥಿಗಳು ಬ್ಯಾಂಕಿಂಗ್ ವ್ಯವಹಾರದ ಜ್ಞಾನ ಪಡೆದುಕೊಳ್ಳುವುದರಿಂದ ವಿದ್ಯಾರ್ಥಿ ವೇತನ ಸೇರಿ ಇತರ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಎನ್.ರಾಜೇಶ್ವರಿ ಹೇಳಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2, ಮೇರಾ ಯುವ ಭಾರತದಿಂದ ಸೋಮವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವ ಜತೆಗೆ ಬ್ಯಾಂಕಿಂಗ್ ಬಗ್ಗೆಯೂ ತಿಳಿಯುವುದು ಅವಶ್ಯ ಎಂದು ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹನುಮಂತಪ್ಪ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ನೆರವು ನೀಡಲಾಗುವುದು. ತರಬೇತಿ ನಂತರ ಬ್ಯಾಂಕ್‌ನಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡಬಹುದು ಎಂದರು.

ಅಮೂಲ್ಯ ಸಾಕ್ಷರತಾ ಕೇಂದ್ರದ ಹಣಕಾಸು ಆರ್ಥಿಕ ಸಲಹೆಗಾರ ಬಿ.ಆರ್. ಶಂಕರಪ್ಪ ಅವರು ಪ್ರಧಾನಮಂತ್ರಿ ಜನಧನ, ಪ್ರಧಾನಮಂತ್ರಿ ಜೀವನ ಜ್ಯೋತಿ ಸುರಕ್ಷಾ, ಅಟಲ್ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪರಿಸರ ವಿಭಾಗದ ಮುಖ್ಯಸ್ಥ ಡಾ. ಪರಿಸರ ನಾಗರಾಜ್, ನೆಹರು ಯುವ ಕೇಂದ್ರದ ಸಹಾಯಕ ಅಧಿಕಾರಿ ರಮೇಶ್, ಕಾರ್ಯಕ್ರಮ ಸಂಚಾಲಕ ಪ್ರೊ. ಹಾ.ಮ.ನಾಗಾರ್ಜುನ ಇದ್ದರು. 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net