ಕೇರಳದಲ್ಲಿ ತಿಂಗಳಲ್ಲಿ 4 ದಿನ 'ಬ್ಯಾಗ್​ಲೆಸ್ ಸ್ಕೂಲ್ ದಿನ' ಆಚರಣೆಗೆ ಸರ್ಕಾರ ಆದೇಶ

bagas
Published on

ತಿರುವನಂತಪುರ: ಕೇರಳ ಸರ್ಕಾರವು 1 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಿಹಿ ಸುದ್ದಿಯೊಂದನ್ನ ನೀಡಿದೆ. ವಿದ್ಯಾರ್ಥಿಗಳಿಗಾಗಿ ತಿಂಗಳಲ್ಲಿ ನಾಲ್ಕು ಬ್ಯಾಗ್ ಮುಕ್ತ ದಿನವಾಗಿ ಮಾಡುವ ಮೂಲಕ ವಿದ್ಯಾರ್ಥಿಗಳಿಗಾಗಿ ಹೊಸ ಯೋಜನೆಯನ್ನು ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಹೇಳಿದ್ದಾರೆ.

ಮಕ್ಕಳು ಮತ್ತು ಪೋಷಕರ ದೂರಗಳನ್ನು ಆಧರಿಸಿ ಶಾಲಾ ಬ್ಯಾಗ್​ಗಳ ತೂಕ ಇಳಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಆದರೂ ಕೂಡ ಶಾಲಾ ಬ್ಯಾಗ್ ತೂಕದ ಬಗ್ಗೆ ದೂರುಗಳು ಹೆಚ್ಚು ಬರುತ್ತಿರುವುದರಿಂದ ತಿಂಗಳಲ್ಲಿ ನಾಲ್ಕು ದಿನ ಬ್ಯಾಗ್ ಮುಕ್ತ ದಿನವಾಗಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ ಎಂದು ಸಚಿವ ಶಿವನ್ ಕುಟ್ಟಿ ಹೇಳಿದರು.

1ನೇ ತರಗತಿಯ ವಿದ್ಯಾರ್ಥಿಗಳ ಮಕ್ಕಳ ಬ್ಯಾಗ್‌ ತೂಕವು 1.6 ರಿಂದ 2.2 ಕೆಜಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್​ 2.5 ರಿಂದ 4.5 ಕೆಜಿ ನಡುವೆ ತೂಕ ಹೊಂದಿರುವಂತೆ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net