ರೋಗ ತಡೆಗೆ ನೀಡಿದ್ದ ಮಾತ್ರೆ ತಿಂದ ಮಕ್ಕಳು ಅಸ್ವಸ್ಥ!; 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು..

Tablet
Published on

ಯಾದಗಿರಿ: ಕಲುಷಿತ ನೀರು ಕುಡಿದು, ಬಿಸಿಯೂಟ ತಿಂದು ಶಾಲಾ ಮಕ್ಕಳು ಅಸ್ವಸ್ಥಗೊಂಡ ಪ್ರಕರಣಗಳು ನಡೆದಿವೆ. ಇದೀಗ ಇಲ್ಲೊಂದು ಕಡೆ ರೋಗ ತಡೆಗೆ ನೀಡಿದ್ದ ಮಾತ್ರೆಗಳನ್ನು ತಿಂದ ಮಕ್ಕಳು ಅಸ್ವಸ್ಥಗೊಂಡಂಥ ಪ್ರಕರಣವೂ ವರದಿಯಾಗಿದೆ. ಈ ಘಟನೆಯಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಯಾದಗಿರಿ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಆನೆಕಾಲು ರೋಗ ತಡೆಗೆ ಮಾತ್ರೆಗಳನ್ನು ಸೇವಿಸಿ ಈ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಆನೆಕಾಲು ರೋಗ ಮುಕ್ತ ಮಾಡಲು ಇಂದು ಇವರಿಗೆಲ್ಲ ಮಾತ್ರೆಗಳನ್ನು ನುಂಗಿಸಲಾಗಿತ್ತು.

ಆದರೆ ಈ ಮಾತ್ರೆಗಳನ್ನು ನುಂಗಿದ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಲ್ಲಿ 20ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net