ದೇವಿಗೆ ವಿಭಿನ್ನ ಹರಕೆ ಹೊತ್ತ ವಿದ್ಯಾರ್ಥಿಗಳು

6-680bd058c7240
Published on

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದಲ್ಲಿ ಹುಲಿಗೆಮ್ಮ ದೇವಿ ದೇವಾಲಯ ಹುಂಡಿ ಹಣ ಎಣಿಕೆ ಬುಧವಾರ ನಡೆದಿದ್ದು, ಕಾಣಿಕೆ ಜತೆಗೆ ವಿದ್ಯಾರ್ಥಿಗಳು ಬೇಡಿಕೆ ಸಲ್ಲಿಸಿ ಬರೆದ ಪತ್ರಗಳು ಪತ್ತೆಯಾಗಿವೆ. ವಿದ್ಯಾರ್ಥಿಯೊಬ್ಬ ತನಗೆ ಪರೀಕ್ಷೆಯಲ್ಲಿ ಯಾವ ವಿಷಯಕ್ಕೆ ಎಷ್ಟು ಅಂಕ ಬರಬೇಕೆಂಬುದನ್ನು ಬರೆದಿದ್ದಾನೆ.

ಅಷ್ಟೇ ಅಂಕ ಬರುವಂತೆ ಮಾಡುವಂತೆ ದೇವಿಯಲ್ಲಿ ಮೊರೆ ಇಟ್ಟಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿನಿ ತಾನು ಬಿ-ಇಡಿ ಮಾಡುತ್ತಿದ್ದು, ಪಾಸ್ ಆಗಬೇಕು. ಇಷ್ಟಪಟ್ಟವರನ್ನು ಮದುವೆ ಆಗಿ ತಾನು ಕಲಿತ ಶಾಲೆಯಲ್ಲಿ ಸರ್ಕಾರಿ ಶಿಕ್ಷಕಿಯಾಗುವಂತೆ ಹರಸಲು ಬೇಡಿಕೆ ಇಟ್ಟಿದ್ದಾಳೆ. ಅಂದುಕೊಂಡಿದ್ದು ಆದಲ್ಲಿ ಒಂದು ತಿಂಗಳ ಸಂಬಳವನ್ನು ದೇವಿಗೆ ಕಾಣಿಕೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದಾಳೆ. ಹುಂಡಿಯಲ್ಲಿ 42 ದಿನದಲ್ಲಿ 94.64 ಲಕ್ಷ ರೂ. ಸಂಗ್ರಹಗೊಂಡಿದೆ. 160 ಗ್ರಾಂ ಕಚ್ಚಾ ಚಿನ್ನ, 10 ಕೆಜಿ ಕಚ್ಚಾ ಬೆಳ್ಳಿ ಜತೆಗೆ 20 ರೂ. ಮುಖಬೆಲೆಯ ಒಂದು ನೇಪಾಳ ನೋಟು ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net