ವಿದ್ಯಾರ್ಥಿಗಳೇ ಶಾಲೆಯ ಆಸ್ತಿ

1741403953615
ಕಂಪಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾರದಾಪೂಜೆ ಆಚರಿಸಲಾಯಿತು. ಮಹದೇವಯ್ಯ,ಕೃಷ್ಣ ಸೇರಿದಂತೆ ಶಿಕ್ಷಕ , ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಜರಿದ್ದರು.
Published on

ಕಂಪಲಾಪುರ: ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳೇ ಆ ಶಾಲೆಯ ಆಸ್ತಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಕಚೇರಿ ವಿಷಯ ಪರಿವೀಕ್ಷಕ ರಾಜಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳು ಅರ್ಥವಾಗದೆ ಇದ್ದರೆ ಶಿಕ್ಷಕರ ಬಳಿ ಕೇಳಿ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಯಾವುದೇ ಅಂಜಿಕೆ ಬೇಡ. ವಿದ್ಯಾರ್ಥಿಗೆ ಎಸ್‌ಎಸ್‌ಎಲ್‌ಸಿ ಜೀವನದಲ್ಲಿ ಪ್ರಮುಖವಾದ ಘಟ್ಟ. ಆ ಹಂತದಲ್ಲಿ ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಿರಿ, ಯಾರ ಮೇಲೂ ಅವಲಂಬಿತರಾಗಬೇಡಿ ಎಂದು ಸಲಹೆ ನೀಡಿದರು.

ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಶ್ಮಿತಾ(124), ಮಹಾಲಕ್ಷ್ಮೀ (123), ಎಸ್.ಶ್ರಾವಣಿ (120), ಹೇಮಂತ್(119)ಗೆ ಕನ್ನಡ ಶಿಕ್ಷಕ ಸಂಜೀವ್‌ಕುಮಾರ್ ನಗದು ಪುರಸ್ಕಾರ ನೀಡಿದರು.

ಹಾಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತಮ. ನಡತೆ ಹೊಂದಿರುವ, ಹೆಚ್ಚು ಹಾಜರಾತಿ, ಕ್ರೀಡೆ , ತೋಟಗಾರಿಕೆಯಲ್ಲಿ ಉತ್ತಮವಾಗಿ ತೊಡಗಿಸಿಕೊಂಡ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಹಿರಿಯ ಶಿಕ್ಷಕಿ ಶಾರದಮ್ಮ ಮಂತ್ರಪಠಣ ಮಾಡುವ ಮೂಲಕ ಪೂಜೆ ನೆರವೇರಿಸಿ ಕೊಟ್ಟರು. ಶಿಕ್ಷಕಿ ಗೀತಾ ಪ್ರಾರ್ಥಿಸಿದರು.

ಮುಖ್ಯ ಶಿಕ್ಷಕ ಮಹದೇವಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಸದಸ್ಯ ಮಂಜು, ಪತ್ರಕರ್ತ ಸದಾಶಿವ ಸೇರಿದಂತೆ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net