ಮತ್ತೆ ನಡೆಯುತ್ತಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ? ಸರ್ಕಾರಕ್ಕೆ ಕೈ ನಾಯಕನ ಸಲಹೆ ಏನು?

Vote Symbol
Published on

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕು. ನಮ್ಮ ಅಧ್ಯಕ್ಷರು (ಡಿ.ಕೆ.ಶಿವಕುಮಾರ್​) ಅಧಿಕಾರಕ್ಕೆ ಬಂದ ಮೇಲೆ ಮರೆತಿದ್ದಾರೆ ಅನ್ನಿಸುತ್ತಿದೆ. ನಾವು ಮಾತು ಕೊಟ್ಟಿದ್ದೇವೆ ಅದನ್ನು ನಡೆಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅಧಿಕಾರಕ್ಕೆ ಬಂದ ಮೇಲೆ ವಿದ್ಯಾರ್ಥಿ ಸಂಘದ ಚುನಾವಣೆ ಮಾಡುತ್ತೇವೆ ಎಂದಿದ್ದೇವೆ, ಈಗ ವಿಶ್ವವಿದ್ಯಾಲಯಗಳಲ್ಲಿನಾವಣೆ ನಡೆಸಿ ಎಂದು ಉಪಮುಖ್ಯಯವರನ್ನು ಕೋರಿದರು. ಅಲ್ಲದೇ, ವಿಶ್ವ ವಿದ್ಯಾಲಯಗಳಲ್ಲಿ ಚುನಾವಣೆ ತನ್ನಿ, ಇಲ್ಲದೇ ಹೋದರೆ ನಾಯಕರ ಹಿಂದೆ ಬ್ಯಾಗ್ ಹಿಡಿದು ಓಡಾಡೋರೇ ನಾಯಕ ಆಗುತ್ತಾರೆ ಎಂದರು.

ಕಾರ್ಯಕರ್ತರ ಮದುವೆಗೆ ಆಹ್ವಾನ ನೀಡಿದರೆ ದೇವರಾಜು ಅರಸು ಅವರಿಗೆ ಹೋಗಲು ಆಗದಿದ್ದರೆ ತಮ್ಮ ರಾಜಕೀಯ ಕಾರ್ಯದರ್ಶಿ ಸಚ್ಚಿದಾನಂದ ಮೂಲಕ ಹಣ ತಲುಪಿಸುತ್ತಿದ್ದರು. ಕಾರ್ಯಕರ್ತರಾದರೆ 5 ಸಾವಿರದಿಂದ 25 ಸಾವಿರದವರೆಗೆ ಹಣ ಕಳುಹಿಸುತ್ತಿದ್ದರು. ಕಾರ್ಯಕರ್ತೆಯರಾದರೆ 25 ರಿಂದ 50 ಸಾವಿರ ಹಣ ಕಳುಹಿಸಿ ಕೊಡುತ್ತಿದ್ದರು ಈಗಲು ಅಂತಹ ವ್ಯವಸ್ಥೆ ಬರಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net