

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ಬಾಲಕನನ್ನು ಪರಿಚಯ ಮಾಡಿಕೊಂಡು ವಿವಸ್ತ್ರಗೊಳಿಸಿ, ಅಶ್ಲೀಲ ಪೋಟೋ ತೆಗೆದು ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿವಸೂಲಿಗೆ ಮಾಡಿದ್ದಾರೆ.
ಪ್ರತಿಷ್ಠಿತ ಖಾಸಗಿ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿಗೆ ಬೆದರಿಸಲಾಗಿದೆ. ಈತನ ತಾಯಿ ಆಡುಗೋಡಿ ಠಾಣೆಗೆ ಏ.25ರಂದು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 5ರ ಮಧ್ಯಾಹ್ನ 3ರಿಂದ ರಾತ್ರಿ 8ರ ನಡುವೆ ಈ ಘಟನೆ ನಡೆದಿದೆ. ತರಗತಿ ಮುಗಿಸಿ ಮಧ್ಯಾಹ್ನ 1.30ಕ್ಕೆ ವಾಪಸ್ ಬರುವಾಗ ವಿದ್ಯಾರ್ಥಿಗೆ ಸ್ನೇಹಿತ ಸಿಕ್ಕಿ ಅಪಾರ್ಟ್‌ಮೆಂಟ್‌ಯೊಂದರ ಪಾರ್ಕಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಆತನ ಸಹಚರರನ್ನು ಕರೆಸಿಕೊಂಡು ವಿದ್ಯಾರ್ಥಿಯನ್ನು ಅರೆಬೆತ್ತಲೆ ಮಾಡಿ ಹುಡುಗಿಯ ಜತೆಗೆ ನಿಲ್ಲಿಸಿ ಅಶ್ಲೀಲ ೆಟೋಗಳನ್ನು ತೆಗೆಯುತ್ತಾರೆ.
ಪ್ರತಿರೋಧ ವ್ಯಕ್ತಪಡಿಸಿದಾಗ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಹಣ ಕೊಡದೆ ಇದ್ದರೇ ಜಾಲತಾಣದಲ್ಲಿ ಪೋಟೋ ಮತ್ತು ವಿಡಿಯೋ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ 10 ಸಾವಿರ ರೂ. ಗೆ ನೀಡುವಂತೆ ಒತ್ತಾಯಿಸಿದ್ದರು. ಮನೆಗೆ ಬಂದ ಮಗನನ್ನು ಗಮನಿಸಿದ ಪಾಲಕರು, ಏನಾಯಿತು ಎಂದು ಪ್ರಶ್ನಿಸಿದಾಗ ಐವರು ಸ್ನೇಹಿತರು ಮಾಡಿದ ದುಷ್ಕೃತ್ಯವನ್ನು ವಿವರಿಸಿದ್ದ. ನೊಂದ ತಾಯಿ, ಈ ಬಗ್ಗೆ ಆಡುಗೋಡಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪೊಲೀಸರು, ಪೋಕ್ಸೋ ಕಾಯ್ದೆ ಮತ್ತು ಬಿಎನ್‌ಎಸ್ ಕಾಯ್ದೆ ಅನ್ವಯ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.