ಸಿಡಿಲಿಗೆ ವಿದ್ಯಾರ್ಥಿ ಬಲಿ

mukesh molkere
Published on

ಹುಲಸೂರು: ಹೊಲದಲ್ಲಿ ಸಂಗ್ರಹಿಸಿಟ್ಟಿದ್ದ ಸೋಯಾ ಬಣವಿ ಮೇಲೆ ಮಂಗಳವಾರ ಸಂಜೆ ತಾಡಪಲ್ ಹಾಕುವ ವೇಳೆ ಸಿಡಿಲು ಬಡಿದು ಮೇಹಕರ ಗ್ರಾಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮುಕೇಶ ಭೀಮರಾವ ಮೊಳಕೇರೆ(೧೬) ಮೃತಪಟ್ಟಿದ್ದಾನೆ. ಭಾಲ್ಕಿಯ ಭಾರತ ಪಬ್ಲಿಕ್ ಸ್ಕೂಲ್​ನಲ್ಲಿ ಓದುತ್ತಿದ್ದ ಮುಕೇಶ ದಸರಾ ರಜೆ ಹಿನ್ನೆಲೆಯಲ್ಲಿ ಮೇಹಕರಗೆ ಆಗಮಿಸಿದ್ದ, ತಂದೆ ಭೀಮರಾವ ತುಳಜಾಪುರದ ದೇವಿ ದರ್ಶನ ಪಡೆಯಲು ತೆರಳಿದ್ದರಿಂದ ತಾಯಿ ಜತೆ ಹೊಲಕ್ಕೆ ಹೋದಾಗ ವಿಧಿ ಸಿಡಿಲ ಮೂಲಕ ಬಲಿ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net