

ಕಲ್ಕತ್ತಾ: 18 ವರ್ಷದ ಜಾಧವ್‍ಪುರ್ ವಿಶ್ವವಿದ್ಯಾಲಯದ ಮೊದಲ ವರ್ಷದ ವಿದ್ಯಾರ್ಥಿ ಸ್ವಾಪ್ನೋದೀಪ್ ಕುಂಡು, ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಹಾರುವ ಮುನ್ನ "ನಾನು ಸಲಿಂಗಕಾಮಿ ಅಲ್ಲ" ಎಂದು ಪದೇ ಪದೇ ಹೇಳುತ್ತಾ ಹೇಳಿದ್ದು ಪ್ರಾಣ ಕಳೆದುಕೊಂಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಕಟ್ಟಡದಿಂದ ಹಾರುವ ಮೊದಲು, ಸ್ವಾಪ್ಲೋದೀಪ್ ತನ್ನ ಸಹ ವಿದ್ಯಾರ್ಥಿಗಳಿಗೆ "ನಾನು ಸಲಿಂಗಕಾಮಿ ಅಲ್ಲ" ಎಂದು ಹೇಳಿದ್ದುಬಾಲ್ಕನಿಯಿಂದ ಹಾರಿದ್ದ ಯುವಕನ ದೇಹವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಶುಕ್ರವಾರ ಕಲ್ಕಾತ್ತಾ ಪೊಲೀಸರು ಸ್ವಾಪ್ನೋದೀಪ್ ಕುಂಡು ಸಾವಿಗೆ ಸಂಬಂಧಿಸಿದಂತೆ. ಆರೋಪಿ ಸೌರಭ್ ಚೌಧರಿಯನ್ನು ಬಂಧಿಸಿದ್ದಾರೆ. ಆರೋಪಿ ಸೌರಭ್, ಈ ಹಿಂದೆ 2022ರಲ್ಲಿ ಜಾಧವ್‍ಪುರ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಎಂಎಸ್ ಸಿ ಪೂರ್ಣಗೊಳಿಸಿದ್ದು, ವಿಶ್ವವಿದ್ಯಾಲಯ ಹಾಸ್ಟೆಲ್‍ನಲ್ಲೇ ಉಳಿಯುತ್ತಿದ್ದರು.
ಪೊಲೀಸರು ತನಿಖೆ ನಡೆಸುವಾಗ, ಮೃತ ಯುವಕನ ಮೇಲೆ ನಡೆದ ರಾಗಿಂಗ್ ಘಟನೆಯಲ್ಲಿ ತಾನೂ ಪಾಲ್ಗೊಂಡಿರುವುದಾಗಿ ಆರೋಪಿ ಸೌರಭ್ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸೌರಭ್ ಚೌಧರಿ ಈಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302/34 ರ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದು ಶನಿವಾರ ನ್ಯಾಯಾಲಯದ ಮುಂದೆ ಆತನನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.
ಬಂಗಾಲಿಯ ಬ್ಯಾಚುಲರ್ ಆಫ್ ಆರ್ಟ್ಸ್ ವಿದ್ಯಾರ್ಥಿಯಾಗಿದ್ದ ನಾಡಿಯಾ ಜಿಲ್ಲೆಯ ಹ್ಯಾನ್ಸ್ಖಾಲಿ ಮೂಲದ ಸ್ವಾಪ್ನೋದೀಪ್ ಕುಂಡು ಬುಧವಾರ ಮಧ್ಯರಾತ್ರಿಯಲ್ಲಿ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಹಾರಿದ್ದರು.
ಜೋರಾಗಿ ಶಬ್ದ ಕೇಳಿದ ನಂತರ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದಾಗ, ಸ್ವಾಪ್ನೋದೀಪ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರನ್ನು ಚಿಕಿತ್ಸೆಗಾಗಿ ಕೆಪಿಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೂ ಆಸ್ಪತ್ರೆಯಲ್ಲಿ ಸ್ವಾಪ್ನೋದೀಪ್ ಗುರುವಾರ ಬೆಳಿಗ್ಗೆ 4: 30 ಕ್ಕೆ ನಿಧನರಾದರು. (ಏಜೆನ್ಸೀಸ್)