ಜ್ಞಾನಾರ್ಜನೆಗೆ ವಿದ್ಯಾರ್ಥಿ ಮಿತ್ರ ಪೂರಕ

HUN-13-JUNE-1(CHIKKA HUNSUR SCHOOL PROGRAMME)
ಹುಣಸೂರು ನಗರದ ಚಿಕ್ಕಹುಣಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜಯವಾಣಿ ಹೊರತರುತ್ತಿರುವ ವಿದ್ಯಾರ್ಥಿಮಿತ್ರ ಸಂಚಿಕೆಯನ್ನು ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಬಿಡುಗಡೆಗೊಳಿಸಿದರು. ನಗರಸಭಾ ಸದಸ್ಯ ದೇವರಾಜು, ಸಹಶಿಕ್ಷಕರಾದ ಬಿ.ಜೆ.ಹರೀಶ್, ಕೆ.ಮಂಜುನಾಥ್, ಎಚ್.ಆರ್.ಮೋಕ್ಷ, ಶೇಷಮ್ಮ, ರಾಜಮ್ಮ, ರೇಷ್ಮಾ, ಪ್ರೇಮಾ ಇತರರಿದ್ದರು.
Published on

ಹುಣಸೂರು: ನಗರದ ಚಿಕ್ಕಹುಣಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಪ್ರಾಯೋಜಕತ್ವದಡಿ ಸರಬರಾಜು ಆಗುತ್ತಿರುವ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಶುಕ್ರವಾರ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಿಕೆಯನ್ನು ಬಿಡುಗಡಗೊಳಿಸಿದ ಗಣೇಶ್ ಕುಮಾರಸ್ವಾಮಿ ಮಾತನಾಡಿ, ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹೊರತರುತ್ತಿರುವ ವಿದ್ಯಾರ್ಥಿಮಿತ್ರ ಸಂಚಿಕೆ ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಪ್ರೋತ್ಸಾಹಿಸುವಲ್ಲಿ ಯಶಸ್ವಿಯಾಗಿದೆ. ಜ್ಞಾನವೊಂದಿದ್ದರೆ ನಾವು ವಿಶ್ವದ ಯಾವುದೇ ಜಾಗದಲ್ಲಿ, ಯಾವುದೇ ಸಮಸ್ಯೆಗಳನ್ನು ಎದುರಿಸಬಲ್ಲೆವು. ವಿದ್ಯಾರ್ಥಿಮಿತ್ರ ಪತ್ರಿಕೆಯಲ್ಲಿ ಉದ್ಯೋಗ ಅವಕಾಶಗಳ ಕುರಿತು ಮಾಹಿತಿ ಸೇರಿದಂತೆ ವಿಷಯವಾರು ಪ್ರಶ್ನೋತ್ತರ, ಸಾಮಾನ್ಯಜ್ಞಾನ ಎಲ್ಲವೂ ಮಿಳಿತವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ ಎಂದು ಶ್ಲಾಘಿಸಿದರು.

ಸರ್ಕಾರಿ ಶಾಲೆಗಳು ಉತ್ತಮವಾಗಿವೆ: ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕೆನ್ನುವ ಗುಂಗಿನಿಂದ ಹೊರಬರಬೇಕು. ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕವೃಂದ ಕಾರ್ಯ ನಿರ್ವಹಿಸುತ್ತಿದೆ. ಬಡಕುಟುಂಬದಿಂದ ಬಂದ ಮಕ್ಕಳೇ ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಮಿತ್ರದಂತಹ ಪತ್ರಿಕೆಗಳು ನಿಮ್ಮ ಶಿಕ್ಷಣಕ್ಕೆ ಪೂರಕವಾಗಲಿದೆ. ಸಾಧಿಸಬೇಕೆನ್ನುವ ನಿರ್ಧಿಷ್ಟ ಗುರಿ ಮತ್ತು ಛಲ ನಿಮ್ಮಲ್ಲಿದ್ದರೆ ಸಾಧನೆಯ ಶಿಖರವೇರಲು ಸಾಧ್ಯವೆನ್ನುವುದನ್ನು ಮರೆಯದಿರಿ ಎಂದು ಸಲಹೆ ನೀಡಿದರು.

ನಗರಸಭಾ ಸದಸ್ಯ ದೇವರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ದಿನನಿತ್ಯದ ಟೈಂ ಟೇಬಲ್ ಹಾಕಿಕೊಂಡು ನಿಗದಿತ ಅವಧಿಯೊಳಗೆ ಓದುವ ಹವ್ಯಾಸ ರೂಢಿಸಿಕೊಳ್ಳಿರಿ. ನೀವೆಲ್ಲ ಬಡ ಕುಟುಂಬದಿಂದಲೇ ಬಂದವರಾಗಿದ್ದು, ನಿಮ್ಮ ಅನುಕೂಲಕ್ಕಾಗಿ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಪತ್ರಿಕೆಯನ್ನು ವೈಯಕ್ತಿಕ ಹಣ ಭರಿಸಿ ನಿಮಗೆ ಪೂರೈಸುತ್ತಿದ್ದು, ಅದರ ಸಂಪೂರ್ಣ ಅನುಕೂಲ ಪಡೆದುಕೊಳ್ಳಿರಿ ಎಂದರು.

ಮುಖ್ಯಶಿಕ್ಷಕ ಧನಂಜಯ್ ಮಾತನಾಡಿ, ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ನಗರಸಭಾಧ್ಯಕ್ಷರು ನೀಡುತ್ತಿರುವ ಕೊಡುಗೆಯನ್ನು ಅಭಿಮಾನಪೂರ್ವಕವಾಗಿ ವಂದಿಸಿದರು. ಶಾಲೆಯಲ್ಲಿ ನಗರಸಭೆ ವತಿಯಿಂದ ಸೈಕಲ್ ಸ್ಟಾೃಂಡ್ ನಿರ್ಮಿಸಿಕೊಡಲು ಕೋರಿದರು.

ಕಾರ್ಯಕ್ರಮದಲ್ಲಿ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜೆ.ಹರೀಶ್, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಆರ್.ಮೋಕ್ಷ, ಸಹಶಿಕ್ಷಕರಾದ ಶೇಷಮ್ಮ, ರಾಜಮ್ಮ, ಕೆ.ಜೆ.ಲಿಲಿ, ರೇಣುಕಾ ರೆಡ್ಡಿ, ಕೆ.ಮಂಜುನಾಥ್, ಪ್ರೇಮಾ, ರೇಷ್ಮಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net