ಸತ್ತ ನಂತರ ಏನಾಗುತ್ತದೆಂದು ಆನ್​ಲೈನ್​ಲ್ಲಿ ಸರ್ಚ್​ ಮಾಡಿದ್ದ Student ನಿಗೂಢ ಸಾವು; ಪೊಲೀಸರು ಹೇಳಿದ್ದಿಷ್ಟು

Crime Scene
Published on

ನಾಗ್ಪುರ: ಸತ್ತ ನಂತರ ಏನಾಗುತ್ತದ ಎಂದು ಆನ್​ಲೈನ್​ನಲ್ಲಿ ಸರ್ಚ್​ ಮಾಡಿದ ಕೆಲವು ಘಂಟೆಗಳ ಬಳಿಕ 17 ವರ್ಷದ ವಿದ್ಯಾರ್ಥಿನಿಯೊಬ್ಬಳು (Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯು (Student) ನಗರದ ಖಾಸಗಿ ಶಾಲೆಯೊಂದರಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ತನಿಖೆಯಲ್ಲಿ ಆಘಾತಕಾರರಿ ಅಂಶಗಳು ಬೆಳಕಿಗೆ ಬಂದಿದ್ದು, ಪೋಷಕರು ಹಾಗೂ ಸ್ಥಳೀಯರು ಈ ವಿಚಾರವನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಮೃತ ವಿದ್ಯಾರ್ಥಿನಿಯು (Student) ಆನ್ಲೈನ್​ ಗೇಮಿಂಗ್​ಗೆ ವ್ಯಸನಿಯಾಗಿದ್ದಳು ಮತ್ತು ಯೂರೋಪಿಯನ್​ ಸಂಸ್ಕೃತಿಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಳು. ಆಕೆ ಸತ್ತ ನಂತರ ಏನಾಗುತ್ತದೆ ಂಎಬುದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದಳು. ಅಲ್ಲದೇ ಹಲವಾರು ವಾರಗಳಿಂದ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಳು.

Suicide

ಮೃತ ವಿದ್ಯಾರ್ಥಿನಿಯು ಮೊದಲಿಗೆ ತನ್ನ ಕೈಯನ್ನು ಸ್ಟೋನ್ ಬ್ಲೇಡ್ ಚಾಕುವಿನಿಂದ ಅಡ್ಡಲಾಗಿ ಕಟ್​ ಮಾಡಿಕೊಂಡಿದ್ದಾಳೆ. ನಂತರ ಕತ್ತು ಕೊಯ್ದುಕೊಂಡು ಆಕೆ ಮೃತಪಟ್ಟಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ ವಿದ್ಯಾರ್ಥಿನಿಯನ್ನು ಗಮನಿಸಿದ ಆಕೆಯ ತಾಯಿ ಹಾಗೂ ಮನೆಕೆಲಸದಾಕೆ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮೊದಲಿಗೆ ಆಕೆಯ ಮೊಬೈಲ್​ಅನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಸತ್ತ ನಂತರ ಏನಾಗುತ್ತದೆ ಎಂದು ಸರ್ಚ್​ ಮಾಡಿರುವುದು ಬೆಳಕಿಗೆ ಬಂತು. ಮತ್ತು ವಿದೇಶಿ ಸಂಸ್ಕೃತಿಗಳ ಬಗ್ಗೆ ಮಾಹಿತಿಯನ್ನು ಆಗಾಗ ಹುಡುಕಾಡಿರುವುದು ಕಂಡು ಬಂದಿದೆ. ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net