'ತೃಣಮೂಲ' ಸಂಘರ್ಷಕ್ಕೆ ಬಾಲಕ ಬಲಿ, ಇರಿತಕ್ಕೊಳಗಾಗಿ ಸತ್ತ 8ನೇ ತರಗತಿ ವಿದ್ಯಾರ್ಥಿ

murder
Published on

ಕೇಶ್​ಪುರ್​: ತೃಣಮೂಲ ಕಾಂಗ್ರೆಸ್ ಪಕ್ಷದ ಎರಡು ತಂಡಗಳ ನಡುವೆ ನಡೆದ ಸಂಘರ್ಷಕ್ಕೆ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ.

ಪಶ್ಚಿಮ ಬಂಗಾಳದ ಮಿಡ್ನಾಪುರ್​ ಜಿಲ್ಲೆಯ ಕೇಶಾಪುರ್​ನಲ್ಲಿ ಗುರುವಾರ ರಾತ್ರಿ ಈ ಗಲಭೆ ನಡೆದಿದೆ.

ತೃಣಮೂಲ ಕಾಂಗ್ರೆಸ್​ ಪಕ್ಷದ ಸ್ಥಳೀಯ ಮುಖಂಡರಾದ ಉತ್ತಮ್ ತ್ರಿಪಾಠಿ ಮತ್ತು ಸಂಜಯ್​ ಪಾನ್ ಎಂಬಿಬ್ಬರ ಬೆಂಬಲಿಗರ ಮಧ್ಯೆ ಈ ಗಲಾಟೆ ನಡೆದಿದೆ. ಈ ಸಂದರ್ಭ ಅನಿರೀಕ್ಷಿತವಾಗಿ ಸಿಕ್ಕಿಹಾಕಿಕೊಂಡ ಎಂಟನೇ ತರಗತಿಯ ಬಾಲಕ ಶೇಖ್​ ಮಜಾಹರ್ ಇರಿತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಕ್ಷದ ಕಾರ್ಯಕರ್ತ ಶೇಖ್ ನಸೀಂ(42) ಗಂಭೀರ ಗಾಯಗಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

ದಾಮೋದರ್ ಚೌಕ್​ ಬಳಿ ನಡೆದ ಈ ಗಲಭೆಯಲ್ಲಿ ಕಚ್ಚಾಬಾಂಬ್​ಗಳನ್ನು ಬಳಸಿಕೊಳ್ಳಲಾಗಿತ್ತು. ಘಟನೆ ಸಂಬಂಧ ಕೊಲೆ ಕೇಸು ದಾಖಲಿಸಿಕೊಳ್ಳಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net