VIDEO| ಶಿಕ್ಷಕಿಗೆ ಹಿಗ್ಗಾಮುಗ್ಗಾ ಹೊಡೆದ ವಿದ್ಯಾರ್ಥಿ!

teacher
Published on

ಅಮೆರಿಕಾ: ಕೆಲವರು ಮೊಬೈಲ್ ಕೈಯಲ್ಲಿದ್ದರೆ ಜಗತ್ತನ್ನು ಮರೆಯುತ್ತಾರೆ. ಇಂದು ವಯಸ್ಸಿನ ಅಂತರವಿಲ್ಲದೇ ಮೊಬೈಲ್​ ಬಳಕೆ ಮಾಡುತ್ತಿದ್ದಾರೆ. ಇಲ್ಲೊಬ್ಬ ವಿದ್ಯಾರ್ಥಿ ಕ್ಲಾಸ್​​ನಲ್ಲಿ ವಿಡಿಯೋ ಗೇಮ್​ ಆಡುತ್ತಾ ಸಿಕ್ಕಿ ಬಿದ್ದಿದ್ದು ಮಾತ್ರವಲ್ಲದೇ ಶಿಕ್ಷಕಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾನೆ.

ಫ್ಲೋರಿಡಾದ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿ ಎಂದಿನಂತೆ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಆದರೆ ಕ್ಲಾಸ್​ ರೂಮ್​ನಲ್ಲಿ ಕುಳಿತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ಮೊಬೈಲ್​ನಲ್ಲಿ ಗೇಮ್​​ ಆಡುತ್ತಿದ್ದನು. ಇದನ್ನು ಗಮನಿಸಿದ ಶಿಕ್ಷಕಿ ಮೊಬೈಲ್​ ಕಿತ್ತುಕೊಂಡು ಹೊರಗೆ ಬಂದಿದ್ದಾರೆ. ಕೋಪಗೊಂಡ ವಿದ್ಯಾರ್ಥಿ ಶಿಕ್ಷಕಿಯನ್ನು ನೆಲಕ್ಕೆ ಉರುಳಿಸಿ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಅಲ್ಲೇ ಸ್ಥಳದಲ್ಲಿದ್ದವರು ಬಂದು ಶಿಕ್ಷಕಿಯನ್ನು ವಿದ್ಯಾರ್ಥಿಯಿಂದ ಕಾಪಾಡಿದ್ದಾರೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೂಡಲೇ ಶಿಕ್ಷಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆ ಆರೋಪವನ್ನು ವಿದ್ಯಾರ್ಥಿಯ ಮೇಲೆ ಹೊರಿಸಲಾಗಿದೆ. ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net