ಗುಣಮಟ್ಟದ ಶಿಕ್ಷಣ ನೀಡಲು ಶ್ರಮವಹಿಸಿ

IMG_20250201_161956
ನುಗ್ಗೇಹಳ್ಳಿ ಶ್ರೀ ಗೋಕುಲ ವಿದ್ಯಾಸಂಸ್ಥೆಯ ಗೋಧೂಳಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಸಿ.ಎನ್.ಬಾಲಕೃಷ್ಣ, ಉದ್ಘಾಟಿಸಿದರು. ಚಂದ್ರಪ್ಪ, ಪೂರ್ಣಿಮಾ, ನಾರಾಯಣಪ್ಪ, ಮನೋಜ್ ಯಾದವ್, ಪೃಥ್ವಿ ಯಾದವ್, ಭುವನೇಶ್ವರಿ, ಸಂಪತ್ ಕುಮಾರ್, ತೋಟಿ ನಾಗರಾಜ್, ರಾಜಣ್ಣ, ಗೋಪಾಲ್ ಇದ್ದರು. 
Published on

ನುಗ್ಗೇಹಳ್ಳಿ: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಖಾಸಗಿ ವಿದ್ಯಾ ಸಂಸ್ಥೆಗಳು ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ನುಗ್ಗೇಹಳ್ಳಿ ಶ್ರೀ ಗೋಕುಲ ವಿದ್ಯಾಸಂಸ್ಥೆಯ ಗೋಧೂಳಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಖಾಸಗಿ ವಿದ್ಯಾಸಂಸ್ಥೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಶ್ರಮವಹಿಸಬೇಕು. ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆ ಅನಾವರಣಕ್ಕೆ ತರಬೇತಿ ಶಿಬಿರಗಳನ್ನು ಆಯೋಜಿಸಬೇಕು. 29 ವರ್ಷಗಳಿಂದ ಗೋಕುಲ ವಿದ್ಯಾಸಂಸ್ಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಬಿಆರ್‌ಸಿ ಅನಿಲ್, ಉದ್ಯಮಿ ಚಂದ್ರಪ್ಪ, ಶಾಲಾ ಸಮಿತಿ ಅಧ್ಯಕ್ಷ ಎನ್. ಬಿ. ಉಮೇಶ್, ಉಪಾಧ್ಯಕ್ಷೆ ಬಿ.ಪೂರ್ಣಿಮಾ, ಸಂಸ್ಥೆ ಕಾರ್ಯದರ್ಶಿ ನಾರಾಯಣಪ್ಪ, ಮುಖ್ಯ ಶಿಕ್ಷಕಿ ಜಿ. ಭುವನೇಶ್ವರಿ ಪೃಥ್ವಿ, ಇಂಜಿನಿಯರ್ ಮನೋಜ್ ಯಾದವ್, ಶಿಕ್ಷಕ ಪೃಥ್ವಿ ಯಾದವ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಸಂಪತ್ ಕುಮಾರ್, ಮುಖಂಡರಾದ ತೋಟಿ ನಾಗರಾಜ್, ಅಂಗಡಿ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೋಪಾಲ್, ಕುಳ್ಳೇಗೌಡ, ಸದಸ್ಯ ಶಿವಕುಮಾರ್, ಯಲ್ಲಪ್ಪ, ಶಿಕ್ಷಕರುಗಳು, ಪಾಲಕರು, ವಿದ್ಯಾರ್ಥಿಗಳು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net