ಸ್ವಚ್ಛತೆಯ ಮಹತ್ವ ಸಾರಿದ ಬೀದಿನಾಟಕ

ald nataka
ಆಲ್ದೂರಿನಲ್ಲಿ ಸ್ವಚ್ಛತೆ, ನೀರಿನ ಮಹತ್ವ ಸಾರುವ ಬೀದಿನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಪ್ರವೀಣ್ ಪೂಜಾರಿ, ಭಾರತಿ, ಚಂದ್ರವಾತಿ, ಕಾಮಾಕ್ಷಿ ಮತ್ತಿತರರಿದ್ದರು.
Published on

ಆಲ್ದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಮೂಡಿಗೆರೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಬೀದಿನಾಟಕವನ್ನು ಮೂಡಿಗೆರೆ ಇಂದಿರಾ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿತ್ತು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಶಿಕ್ಷಕ ಪ್ರವೀಣ್ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರುತಿ ಕಲಾ ತಂಡದವರು ನೀರು, ನೈರ್ಮಲ್ಯ, ಸ್ವಚ್ಛತೆ, ಬಯಲು ಶೌಚಮುಕ್ತ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಒಕ್ಕೂಟದ ಉಪಾಧ್ಯಕ್ಷೆ ಚಂದ್ರಾವತಿ, ವಲಯ ಮೇಲ್ವಿಚಾರಕ ದಾಮೋದರ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಭಾರತಿ, ಸೇವಾ ಪ್ರತಿನಿಧಿ ಕಾಮಾಕ್ಷಿ ಹಾಗೂ ಹೊಂಬಾಳೆ ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net