ಆರೋಗ್ಯ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

Published on

ಹುಣಸೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ನಗರದ ಟಿಎಚ್‌ಒ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾಯಕ್ರಮದಡಿ ಆಯೋಜಿಸಿದ್ದ ಬೀದಿನಾಟಕ ಪ್ರದರ್ಶನಕ್ಕೆ ಮಂಗಳವಾರ ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಲಾಖೆಯ ಪ್ರಮುಖ ಕಾರ್ಯಕ್ರಮಗಳಾದ ತಾಯಿ-ಮಗು ಆರೋಗ್ಯ, ಬಾಲ್ಯವಿವಾಹ ತಡೆ, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಗ್ರಾಮೀಣರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕಲಾತಂಡಗಳಿಂದ ಬೀದಿನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹನಗೋಡು ಹೋಬಳಿ ವ್ಯಾಪ್ತಿಯ ನೇರಳಕುಪ್ಪೆ ಎ ಮತ್ತು ಬಿ ಹಾಡಿ, ದೊಡ್ಡಹೆಜ್ಜೂರು, ಶೆಟ್ಟಳ್ಳಿ ಹಾಡಿ, ಹರಳಹಳ್ಳಿ ಹಾಡಿ, ಶಂಕರಪುರ ಹಾಡಿ, ಹಿರೀಕ್ಯಾತನಹಳ್ಳಿ, ಹರವೆ, ರಂಗಯ್ಯನಕೊಪ್ಪಲು, ಕಟ್ಟೆಮಳಲವಾಡಿ, ಕೊತ್ತೇಗಾಲ, ಯಮಗುಂಬ, ಸಿಂಗರಮಾರನಹಳ್ಳಿ ಗ್ರಾಮಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.

ಗಿರಿಜನ ಸಂಚಾರಿ ಘಟಕದ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಸರ್ವಜನಾಂಗದ ಕಲಾತಂಡದ ಅಧ್ಯಕ್ಷೆ ರೂಪಾ, ಸದಸ್ಯರಾದ ರಮೇಶ್, ಆಸ್ಮಾಬಾನು, ಆಕಾಶ್, ಅಮರ್, ಮೇಘನಾ ಹಾಜರಿದ್ದರು.

ಹುಣಸೂರು ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಡಾ.ಸೌಮ್ಯಶ್ರೀ, ರಾಜೇಶ್ವರಿ, ರಮೇಶ್, ಆಕಾಶ್, ಅಮರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net