ಹಾಡಹಗಲೇ 5 ವರ್ಷದ ಬಾಲಕಿಯ ಮೇಲೆ ಬೀದಿನಾಯಿಗಳ ದಾಳಿ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ!

dog fight
Published on

ತಮಿಳುನಾಡು: ಹೊಸೂರಿನಿಂದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಐದು ವರ್ಷದ ಬಾಲಕಿ ಮೇಲೆ ಹಗಲು ಹೊತ್ತಿನಲ್ಲಿಯೇ ಮೂರು ಬೀದಿ ನಾಯಿಗಳು ದಾಳಿ ನಡೆಸಿವೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿ ನಡೆದುಕೊಂಡು ಹೋಗುತ್ತಿರುವಾಗ ಒಂದೊಂದೇ ನಾಯಿಗಳು ಅವಳ ಕಡೆಗೆ ಓಡಿ, ಅವಳನ್ನು ಕೆಳಕ್ಕೆ ಬೀಳಿಸಿ ಎಳೆದಾಡಿವೆ. ಅದೃಷ್ಟವಶಾತ್ ಆಕೆಯನ್ನು ರಕ್ಷಿಸಲು ವ್ಯಕ್ತಿಯೊಬ್ಬರು ಬಾಲಕಿಯತ್ತ ಓಡಿ ಬಂದಿದ್ದಾರೆ.

ವೈರಲ್ ವಿಡಿಯೋ ಕುರಿತು...
ಆರಂಭದಲ್ಲಿ ಚಿಕ್ಕ ಹುಡುಗಿ ನಾಯಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಳೆ. ಅದಕ್ಕೆ ಕೆಲವು ಕೈ ಸನ್ನೆ ಮಾಡಿದಾಗ ನಾಯಿ ಅವಳ ಕಡೆಗೆ ಧಾವಿಸಿ ಹಾರಲು ಪ್ರಯತ್ನಿಸಿದೆ. ಆ ನಂತರ ಎರಡು ನಾಯಿಗಳು ಬಂದಿವೆ. ಬೀದಿನಾಯಿಗಳು ಆಕೆಯ ಮೇಲೆ ದಾಳಿ ಮಾಡುತ್ತಿದ್ದಂತೆ ರಸ್ತೆಯ ಮೇಲೆ ಬಿದ್ದು, ಸಹಾಯಕ್ಕಾಗಿ ಅರಚಿಕೊಂಡಾಗ ಒಬ್ಬ ವ್ಯಕ್ತಿ ಓಡಿಹೋಗಿದ್ದಾರೆ. ನಾಯಿಗಳು ಅವಳನ್ನು ಎಳೆದುಕೊಂಡು ಕಚ್ಚುವ ವೇಳೆ ಬಾಲಕಿಯನ್ನು ರಕ್ಷಿಸಿದ್ದಾನೆ.

ಚಿಕಿತ್ಸೆ ಪಡೆಯುತ್ತಿರುವ ಬಾಲಕಿ
ಬಾಲಕಿಯನ್ನು ಕೃಷ್ಣಗಿರಿ ಪುರಸಭೆಯ ವಾಸವಿ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಆಕೆಯ ತಲೆ ಮತ್ತು ಹೊಟ್ಟೆಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಹೆಚ್ಚುತ್ತಿರುವ ನಾಯಿ ದಾಳಿ ಪ್ರಕರಣ
ಈ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ನಾಯಿಗಳ ಹಾವಳಿ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗಿವೆ ಎಂದು ತಿಳಿದುಬಂದಿದೆ. ಜುಲೈನಲ್ಲಿ 65 ವರ್ಷದ ವೃದ್ಧರೊಬ್ಬರ ಮೇಲೆ ದಾಳಿ ಮಾಡಿ ತೀವ್ರ ಗಾಯಗಳಾಗಿ ಸಾವನ್ನಪ್ಪಿದ್ದರು. ಈ ವರ್ಷದ ಆರಂಭದಲ್ಲಿ ಹೊಸೂರು ಬಾಲಾಜಿ ಬೀದಿಯಲ್ಲಿ ಏಳು ಚಿಕ್ಕ ಮಕ್ಕಳನ್ನು ಬೀದಿ ನಾಯಿಗಳು ಕಚ್ಚಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net