

ನವದೆಹಲಿ: ಚಂಡಮಾರುತ ದೇಶದ ಹಲವೆಡೆ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಒಂದೆಡೆ ಬಿಫರ್ ಜಾಯ್ ಚಂಡಮಾರುತವು ಅನೇಕರ ಜೀವನವನ್ನು ಕಷ್ಟಕರವಾಗಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ರೆಸ್ಟೋರೆಂಟ್ ಅಲ್ಲಿ ಬಿರುಗಾಳಿಯು ಏಕಾಏಕಿ ಅಪ್ಪಳಿಸಿದಾಗ ಗ್ರಾಹಕರು ತೊಂದರೆಗೀಡಾದರು, ರೆಸ್ಟೊರೆಂಟ್‌ನಲ್ಲಿ ಬಿರುಗಾಳಿ ಬೀಸುತ್ತಿದ್ದು, ಕುರ್ಚಿ, ಮೇಜುಗಳು ಗಾಳಿಯಲ್ಲಿ ಹಾರುವುದರ ಜತೆಗೆ ಜನರು ಹಾರಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಜೋರಾಗಿ ಗಾಳಿ ಬೀಸುತ್ತಿದೆ. ಈ ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಜನರು ಕಂಬಗಳನ್ನು ಹಿಡಿದು ನಿಂತಿದ್ದರು. ಬಿರುಗಾಳಿಗೆ ಆಕಾಶದಲ್ಲಿ ಜನರು ಹಾರಾಡಿದ್ದಾರೆ.
ಚಂಡಮಾರುತದ ಅನಾಹುತ ತಪ್ಪಿಸಲು ಕೆಲವರು ಕಂಬ ಹಿಡಿದು ನಿಂತಿದ್ದಾರೆ. ಜನ ಆಸರೆಯಾಗಿದ್ದ ಕಂಬವೇ ಬೀಳುವಷ್ಟು ವೇಗದಲ್ಲಿ ಗಾಳಿ ಬೀಸುತ್ತಿದ್ದರೂ ಜೋರಾದ ಗಾಳಿಗೆ ಕಂಬಗಳು ಉರುಳಿ ಬಿದ್ದಿದೆ. ಈ ಘಟನೆ ಎಲ್ಲಿ ನಡೆದಿರುವುದು ಎನ್ನುವ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.