ಷೇರುಪೇಟೆ ನಷ್ಟ: ಕೋಟ್ಯಾಧಿಪತಿಗಳ ಸ್ಥಾನಪಲ್ಲಟ- ಯಾರು ಯಾವ ಸ್ಥಾನದಲ್ಲಿದ್ದಾರೆ? | Stock Market

billionaires
Published on

ಮುಂಬೈ: ಮಧ್ಯಪ್ರಾಚ್ಯದಲ್ಲಿನ ಪ್ರಕ್ಷುಬ್ಧತೆಯು ಸ್ಟಾಕ್ ಮಾರುಕಟ್ಟೆ(Stock Market) ಮೇಲೆ ಪರಿಣಾಮ ಬೀರಿದೆ. ಅಷ್ಟೇ ಅಲ್ಲ, ವಿಶ್ವದ ಕೋಟ್ಯಾಧಿಪತಿಗಳ ಪಟ್ಟಿಯೇ ಬದಲಾಗಿಹೋಗಿದೆ. ಇಸ್ರೇಲ್-ಇರಾನ್ ಯುದ್ಧವು ವಿಶ್ವದ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದಂತೆಯೇ ಭಾರತೀಯ ಷೇರು ಮಾರುಕಟ್ಟೆ ಮೇಲೆಯೂ ಬೀರಿ, ಗುರುವಾರ ಸಾವಿರಾರು ಕೋಟಿ ರೂ.ನಷ್ಟಕ್ಕೆ ಕಾರಣವಾಯಿತು. ಹೀಗಾಗಿ ದೇಶದ ಬಿಲಿಯನೇರ್‌ಗಳ ಪಟ್ಟಿ ಬದಲಾಗಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ 4 ಅಕ್ಟೋಬರ್ 2024 ರಂದು ವಿಶ್ವದ 10 ಮಂದಿ ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಟೆಸ್ಲಾ ಮತ್ತು ಸಾಮಾಜಿಕ ಮಾಧ್ಯಮ ಎಕ್ಸ್​ ನ ಮಾಲೀಕ ಎಲೋನ್ ಮಸ್ಕ್ ಆಗಿದ್ದಾರೆ. ಅವರ ನಿವ್ವಳ ಮೌಲ್ಯವು 5.97 ಶತಕೋಟಿ ಡಾಲರ್​ಇದ್ದು, ಮಾರುಕಟ್ಟೆ ಕುಸಿತದಿಂದ 256 ಶತಕೋಟಿ ಡಾಲರ್​ಗೆ ಕುಸಿದಿದೆ. ಈ ಪಟ್ಟಿಯಲ್ಲಿ ಮೆಟಾದ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ 2ನೇ ಸ್ಥಾನದಲ್ಲಿದೆ. ಅವರ ಒಟ್ಟು ಸಂಪತ್ತು 206 ಬಿಲಿಯನ್ ಡಾಲರ್ ಆಗಿದೆ.

ತಂತ್ರಜ್ಞಾನ ಉದ್ಯಮದ ಜೆಫ್ ಬೆಜೋಸ್ ಹೆಸರು ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅವರ ಒಟ್ಟು ಸಂಪತ್ತು 2.62 ಶತಕೋಟಿ ಡಾಲರ್​ನಿಂದ 205 ಶತಕೋಟಿ ಡಾಲರ್​ಗೆ ಇಳಿದಿದೆ. 4ನೇ ಸ್ಥಾನದಲ್ಲಿರುವ ಲೂಯಿ ವಿಟಾನ್ ಮಾಲೀಕ ಬರ್ನಾರ್ಡ್ ಅರ್ನಾಲ್ಟ್ 193 ಬಿಲಿಯನ್ ಡಾಲರ್​ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಲ್ಯಾರಿ ಎಲಿಸನ್ ಒಟ್ಟು 179 ಬಿಲಿಯನ್ ಡಾಲರ್​ ಆಸ್ತಿಯೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

ಅದೇ ರೀತಿ ಮೈಕ್ರೋಸಾಫ್ಟ್ ಸಿಇಒ ಬಿಲ್ ಗೇಟ್ಸ್ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ನಿವ್ವಳ ಮೌಲ್ಯ 161 ಬಿಲಿಯನ್ ಡಾಲರ್ ಆಗಿದೆ. ಲ್ಯಾರಿ ಪೇಜ್ ಅವರ ನಿವ್ವಳ ಮೌಲ್ಯವು 64 ಮಿಲಿಯನ್ ಡಾಲರ್​ ಕಡಿಮೆಯಾಗಿದೆ. ಈ ಪತನದ ನಂತರ, ಅವರ ನಿವ್ವಳ ಮೌಲ್ಯವು 150 ಬಿಲಿಯನ್ ಡಾಲರ್ ಆಗಿದೆ. ಅವರು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದಾರೆ.

ಇನ್ನು ಸ್ಟೀವ್ ಬಾಲ್ಮರ್ ಅವರ ನಿವ್ವಳ ಮೌಲ್ಯವು 213 ಮಿಲಿಯನ್‌ ಡಾಲರ್​ನಿಂದ 145 ಶತಕೋಟಿ ಡಾಲರ್​ಗೆ ಇಳಿದಿದೆ. ಅವರು 8ನೇ ಸ್ಥಾನದಲ್ಲಿದ್ದಾರೆ. ಸ್ಟಾಕ್ ಮಾರುಕಟ್ಟೆಯ ಹಿರಿಯ ಹೂಡಿಕೆದಾರ ವಾರೆನ್ ಬಫೆಟ್ 9ನೇ ಸ್ಥಾನಕ್ಕೆ ಬಂದಿದ್ದಾರೆ. ಈಗ ಅವರ ಒಟ್ಟು ಆಸ್ತಿ 143 ಬಿಲಿಯನ್ ಡಾಲರ್​ ಆಗಿದೆ. ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೆರ್ಗೆಯ್ ಬ್ರಿನ್ 10 ನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯ 141 ಬಿಲಿಯನ್ ಡಾಲರ್ ಆಗಿದೆ.

ಭಾರತೀಯ ಕೋಟ್ಯಾಧಿಪತಿಗಳ ಸ್ಥಿತಿ: Stock Market

ಗುರುವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತದಿಂದಾಗಿ ಹೂಡಿಕೆದಾರರು 10 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರು. ಇದರಲ್ಲಿ ಬಿಲಿಯನೇರ್‌ಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಕೂಡ ಸೇರಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 4.29 ಶತಕೋಟಿ ಡಾಲರ್​ ನಷ್ಟ ಅನುಭವಿಸಿದ್ದಾರೆ. ಈಗ ಅವರ ನಿವ್ವಳ ಮೌಲ್ಯವು 107 ಬಿಲಿಯನ್ ಡಾಲರ್ ಆಗಿದ್ದು, ಕೋಟ್ಯಾಧಿಪತಿಗಳ ಶ್ರೇಯಾಂಕದಲ್ಲಿ 12ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಕುಸಿದಿದ್ದಾರೆ. ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು 2.93 ಶತಕೋಟಿ ಡಾಲರ್​ ಕುಸಿದಿದ್ದು, ಈಗ ಅವರ ಒಟ್ಟು ಸಂಪತ್ತು 100 ಬಿಲಿಯನ್ ಡಾಲರ್ ಆಗಿದೆ. ಅವರು ಬಿಲಿಯನೇರ್‌ಗಳ ಪಟ್ಟಿಯಲ್ಲಿ 15ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net