

ಮುಂಬೈ: ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಅಡಗುತಾಣಗಳ ಮೇಲೆ ಭಾರತ ವಾಯುದಾಳಿ ನಡೆಸಿದ ಹಿನ್ನೆಲೆಯಲ್ಲಿ ಬುಧವಾರ ಭಾರತೀಯ ಷೇರುಪೇಟೆ ತೀವ್ರ ಏರಿಳಿತ ಕಂಡು, ನಂತರ ಏರಿಕೆಯಲ್ಲಿ ಕೊನೆಗೊಂಡಿತು. ದಿನದ ವಹಿವಾಟಿನ ನಡುವೆ ಸೆನ್ಸೆಕ್ಸ್ ಒಮ್ಮೆ 80,844ರಷ್ಟು ಎತ್ತರಕ್ಕೆ, ಮತ್ತೊಮ್ಮೆ 79,937ರಷ್ಟು ಕೆಳಕ್ಕೆ ಹೋಯಿತು. ಕೊನೆಗೆ 105 ಅಂಕ ಏರಿಕೆ ದಾಖಲಿಸಿ 80,746ಕ್ಕೆ ಸ್ಥಿರವಾಯಿತು. ನಿಫ್ಟಿ ಒಂದು ಹಂತದಲ್ಲಿ 24,449ರಷ್ಟು ಎತ್ತರಕ್ಕೆ ಮತ್ತು ಇನ್ನೊಂದು ಹಂತದಲ್ಲಿ 24,220ರಷ್ಟು ಕೆಳಕ್ಕೆ ಹೋಯಿತು. ಕೊನೆಗೆ 34 ಅಂಕ ಏರಿಕೆ ದಾಖಲಿಸಿ 24,414ಕ್ಕೆ ಸ್ಥಿರಗೊಂಡಿತು.
ಭಾರತ-ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಬುಧವಾರ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿಯ ಬೆಲೆ 45 ಪೈಸೆಯಷ್ಟು ಇಳಿಕೆಯಾಗಿ 84.80ಕ್ಕೆ ತಲುಪಿದೆ.
ಕರಾಚಿ: ಪಾಕಿಸ್ತಾನ ಷೇರು ಸೂಚ್ಯಂಕ ಬುಧವಾರ 6,500 ಅಂಕ ಕುಸಿದಿದೆ. ಮಂಗಳ ವಾರ 1,13,568ಕ್ಕೆ ಅಂತ್ಯ ಗೊಂಡಿದ್ದ ಸೂಚ್ಯಂಕ ಬುಧವಾರ 1,07,007ಕ್ಕೆ ತಲುಪಿತು. ಮಾರುಕಟ್ಟೆ ವಿಪರೀತ ಕುಸಿತಕ್ಕೆ ಒಳಗಾಗಿದ್ದನ್ನು ಕಂಡು ಕೆಲ ಕಾಲ ವಹಿವಾಟನ್ನು ಸ್ಥಗಿತಗೊಳಿಸ ಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಇದು 2ನೇ ದೊಡ್ಡ ಕುಸಿತ. ಟ್ರಂಪ್ ತೆರಿಗೆ ಘೊಷಣೆ ಮಾಡಿದಾಗ 8700 ಅಂಕ ಕುಸಿದಿತ್ತು.