ದಾಖಲೆಯ ಉನ್ನತ ಮಟ್ಟ ಮುಟ್ಟಿದ ನಂತರ ಫ್ಲ್ಯಾಟ್​ ಆದ ಷೇರುಪೇಟೆ

stock market 2
Published on

ಮುಂಬೈ: ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ನಂತರ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಬಹುತೇಕ ಯಥಾಸ್ಥಿತಿಯಲ್ಲಿ ಮುಂದುವರಿದವು. ಕನ್ಸೂಮರ್​ ಡ್ಯೂರೆಬಲ್ಸ್​, ಬಂಡವಾಳ ಸರಕುಗಳು ಮತ್ತು ಇಂಧನ ಷೇರುಗಳಲ್ಲಿ ಲಾಭಕ್ಕಾಗಿ ಮಾರಾಟ ಕಂಡುಬಂದಿತು.

30 ಷೇರುಗಳ ಬಿಎಸ್‌ಇ ಸೂಚ್ಯಂಕವು 36.45 ಅಂಕಗಳು ಅಥವಾ ಶೇಕಡಾ 0.05 ರಷ್ಟು ಏರಿಕೆಯಾಗಿ 77,337.59 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟದಲ್ಲಿ ನೆಲೆಸಿತು. ಬೆಳಗಿನ ವಹಿವಾಟಿನಲ್ಲಿ ಇದು 550.49 ಅಂಕಗಳು ಅಥವಾ ಶೇಕಡಾ 0.71 ರಷ್ಟು ಏರಿಕೆ ಕಂಡು 77,851.63 ರ ತಾಜಾ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು.

ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 41.90 ಅಂಕಗಳು ಅಥವಾ ಶೇಕಡಾ 0.18 ರಷ್ಟು ಕುಸಿದು 23,516 ಕ್ಕೆ ಕೊನೆಗೊಂಡಿತು. ದಿನದ ವಹಿವಾಟಿನಲ್ಲಿ ಇದು 106.1 ಅಂಕಗಳು ಅಥವಾ ಶೇ. 0.45ರಷ್ಟು ಏರಿಕೆಯಾಗಿ 23,664 ರ ಹೊಸ ದಾಖಲೆಯನ್ನು ಮುಟ್ಟಿತ್ತು.

ಪ್ರಮುಖ ಷೇರುಗಳಾದ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರಾ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಲಾಭ ಗಳಿಸಿದವು. ಟೈಟಾನ್, ಮಾರುತಿ, ಭಾರ್ತಿ ಏರ್‌ಟೆಲ್, ಲಾರ್ಸನ್ ಆ್ಯಂಡ್​ ಟೂಬ್ರೊ, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಷೇರುಗಳು ಕುಸಿತ ದಾಖಲಿಸಿದವು.

ಏಷ್ಯಾ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ಲಾಭ ಕಂಡರೆ, ಶಾಂಘೈ ನಷ್ಟ ಅನುಭವಿಸಿತು. ಐರೋಪ್ಯ ಮಾರುಕಟ್ಟೆಗಳಲ್ಲಿ ಕಡಿಮೆ ವಹಿವಾಟು ಕಂಡುಬಂದಿತು. ಮಂಗಳವಾರ ಅಮೆರಿಕದ ಮಾರುಕಟ್ಟೆಗಳು ಲಾಭದಲ್ಲಿದ್ದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 2,569.40 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರ 308.37 ಅಂಕಗಳು ಅಥವಾ 0.40 ರಷ್ಟು ಏರಿಕೆಯಾಗಿ 77,301.14 ಕ್ಕೆ ಸ್ಥಿರವಾಗಿತ್ತು. ನಿಫ್ಟಿ 50 ಸೂಚ್ಯಂಕವು 92.30 ಅಂಕಗಳು ಅಥವಾ ಶೇ. 0.39 ರಷ್ಟು ಏರಿಕೆಯಾಗಿ 23,557.90 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net