Stock Market; ಸತತ 7 ದಿನಗಳಿಂದ ಷೇರುಪೇಟೆ ಕುಸಿತ: ಲಾಭ, ನಷ್ಟ ಗಳಿಸಿದ ಸ್ಟಾಕ್​ಗಳ್ಯಾವು?

Untitled design - 2025-09-29T164940.058
Published on

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ದಿನವಾದ ಸೋಮವಾರ (ಸೆ.29) ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಮೂಲಕ ಕಳೆದ ಸತತ 7 ದಿನಗಳಿಂದ ಮಾರುಕಟ್ಟೆ ನಷ್ಟ ಅನುಭವಿಸುತ್ತಿದೆ.

ಸೆನ್ಸೆಕ್ಸ್ 62 ಪಾಯಿಂಟ್ ಅಥವಾ ಶೇಕಡಾ 0.08 ರಷ್ಟು ಕುಸಿತ ಕಂಡು 80,364.94 ಕ್ಕೆ ತಲುಪಿದರೆ, ನಿಫ್ಟಿ 20 ಪಾಯಿಂಟ್ ಅಥವಾ ಶೇಕಡಾ 0.08 ರಷ್ಟು ಕುಸಿತ ಕಂಡು 24,634.90 ಕ್ಕೆ ತಲುಪಿತು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 0.34 ರಷ್ಟು ಏರಿಕೆಯಾಗಿ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ. 0.17 ರಷ್ಟು ಕುಸಿತ ಕಂಡಿದೆ.

ಸೆನ್ಸೆಕ್ಸ್‌ನಲ್ಲಿ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್‌ಗಳು ಹೆಚ್ಚಿನ ಕುಸಿತ ಕಂಡವೆ. ಆದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಸೂಚ್ಯಂಕಕ್ಕೆ ಬಲವಾದ ಬೆಂಬಲವನ್ನು ನೀಡಿತು.

ನಿಫ್ಟಿ ಸೂಚ್ಯಂಕದಲ್ಲಿ ಇಂಡಸ್‌ಇಂಡ್ ಬ್ಯಾಂಕ್ (ಶೇ 3.07 ರಷ್ಟು ಏರಿಕೆ), ಟೈಟಾನ್ ಕಂಪನಿ (ಶೇ 2.70 ರಷ್ಟು ಏರಿಕೆ), ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ (ಶೇ 1.65 ರಷ್ಟು ಏರಿಕೆ) ಷೇರುಗಳು ಅತಿ ಹೆಚ್ಚು ಲಾಭ ಗಳಿಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net