

ಯೂಕ್ರೇನ್: ರಷ್ಯಾದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಶನಿವಾರ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.ಯುದ್ಧದ ಹೊರತಾಗಿಯೂ ನಾವು ಇತರೆ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮೊದಲಿನಿಂದಲೂ ಪ್ರಯತ್ನಿಸಿದ್ದೇವೆ ಎಂದು ಬುಚ್ಗೆ ಭೇಡಿ ನೀಡಿರುವ ಆಸ್ಟ್ರಿಯನ್ ಚಾನ್ಸೆಲರ್ ಕರ್ಲ್ ನೆಹಮ್ಮೆರ್ ಅವರೊಂದಿಗೆ ಹೇಳಿಕೆ ನೀಡಿದ್ದಾರೆ.
ರಾಜತಾಂತ್ರಿಕ ಮಾತುಕತೆ ಮೂಲಕ ಯುದ್ಧವನ್ನು ಕೊನೆಗೊಳಿಸಲು ಯೂಕ್ರೇನ್ ಸಿದ್ಧವಾಗಿದೆ.ಮಾರ್ಚ್ 29 ರಂದು ಉಭಯ ರಾಷ್ಟ್ರಗಳು ಮಾತುಕತೆ ನಡೆಸಿದ್ದವು ಎಂದಿದ್ದಾರೆ.ಇದೀಗ ಯೂಕ್ರೇನ್ ಮತ್ತೆ ಮಾತುಕತೆಗೆ ಆಹ್ವಾನಿಸಿದೆ.ನಾವು ಹೋರಾಡಲು ಸಿದ್ಧರಿದ್ದೇವೆ ಹಾಗೂ ರಾಜತಾಂತ್ರಿಕ ಮೂಲಕ ಯುದ್ಧವನ್ನು ಕೊನೆಗೊಳಿಸಲು ಸಜ್ಜಾಗಿದ್ದೇವೆ ಎಂದಿರುವ ಝೆಲೆನ್ಸ್ಸ್ಕಿ ಪೂರ್ವ ಮತ್ತು ಪಶ್ಚಿಮದಲ್ಲಿನ ನಮ್ಮ ಪ್ರದೇಶಗಳ ಆಕ್ರಮಣಕ್ಕೆ ಸೈನಿಕರನ್ನು ಸಜ್ಜುಗೊಳಿಸಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.