ರಾಜೀನಾಮೆ ಹೇಳಿಕೆಗೆ ಈಗಲೂ ಬದ್ಧ; ಕೆ.ಬಿ.ಕೋಳಿವಾಡ ಪುನರುಚ್ಚಾರ

MUDA SCAM
Published on


ಬೆಂಗಳೂರು: ಮುಖ್ಯಮಂತ್ರಿ ರಾಜೀನಾಮೆ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಸಿಎಂ ರಾಜಿನಾಮೆ ನೀಡಬೇಕೆಂಬ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕಾಂಗ್ರೆಸ್‌ನ ಹಿರಿಯ ನಾಯಕ, ನಾನು ಮಲ್ಲಿಕಾರ್ಜುನ ಖರ್ಗೆ ಸ್ನೇಹಿತರು. ಸಿಎಂ ವಿಚಾರವಾಗಿ ನಾನು ಪಕ್ಷದ ದೃಷ್ಟಿಯಿಂದ ಹೇಳಿದ್ದೇನೆ. ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲ, ಆದರೆ ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ ಎಂದರು.
ಹರಿಯಾಣ ಚುನಾವಣೆಯಲ್ಲಿ ಮೋದಿ ಕರ್ನಾಟಕದ ಬಗ್ಗೆ ಮಾತನಾಡಿದ್ದರು. ಮುಡಾ ಹಾಗೂ ವಾಲ್ಮೀಕಿ ಹಗರಣ ಪ್ರಸ್ತಾಪಿಸಿದ್ದರು. ಅವರು ಪದೇ ಪದೆ ಮಾತನಾಡಿದ್ದು ಪರಿಣಾಮ ಆಗಿದೆ ಎಂದು ಚುನಾವಣೆ ಲಿತಾಂಶವನ್ನು ಇದೇ ವೇಳೆ ವಿಶ್ಲೇಷಿಸಿದರು.
ಜಾತಿ ಜನಗಣತಿಯನ್ನ ಆದಷ್ಟು ಬೇಗ ಜಾರಿಗೊಳಿಸಬೇಕು. ಇದರಿಂದ ಯಾವುದೇ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ಹಾಗಾಗಿ ಇದನ್ನು ಮತ್ತೆ ಮುಂದೂಡುವ ಅವಶ್ಯಕತೆ ಇಲ್ಲ. ನಾನು ಕೂಡ ಅನೇಕ ಹಳ್ಳಿಗಳಿಗೆ ಸಮೀಕ್ಷೆ ನಡೆಸುವವರನ್ನ ಕರೆದುಕೊಂಡು ಹೋಗಿದ್ದೇನೆ. ಜಾತಿ, ಉಪಜಾತಿ, ಸಾಮಾಜಿಕ, ಶೈಕ್ಷಣಿಕವಾಗಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಯಾವುದೇ ಲೋಪವಾಗಿಲ್ಲ
ಒಂದು ವೇಳೆ ಲೋಪವಾಗಿದ್ದರೆ ತಿದ್ದಲು ಒಂದು ತಿಂಗಳು ಸಮಯಾವಕಾಶ ಕೊಡಲಿ ಎಂದರು.
ಒಂದೆರಡು ತಿಂಗಳಲ್ಲಿ ವರದಿಯನ್ನ ಜಾರಿಗೊಳಿಸಲೇಬೇಕು, ಕಾಂತರಾಜ ವರದಿ ಕೇವಲ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಜನಗಣತಿ ಮಾತ್ರವಲ್ಲ. ಅದು ಜಾತಿ ಜನಗಣತಿ ಕೂಡ ಹೌದು
ವೈಜ್ಞಾನಿಕ, ಅವೈಜ್ಞಾನಿಕ ಎಂದರೆ ಏನೂ ಅಂತ ಅರ್ಥ ಆಗುತ್ತಿಲ್ಲ ಎಂದ ಅವರು ವರದಿ ಜಾರಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುವುದಿಲ್ಲ. ಉಪಸಮಿತಿ ರಚಿಸಿ ಜಾರಿಗೆ ತಡ ಮಾಡುವ ಅವಶ್ಯಕತೆ ಇಲ್ಲ, ಕೆನೆಪದರ ಕಡ್ಡಾಯ ಎಂದು ನನ್ನ ಅಭಿಪ್ರಾಯ ಎಂದರು.
ಮನೆಯಲ್ಲಿ ಕುಳಿತು ವರದಿ ಸಿದ್ಧಪಡಿಸಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಶಾಮನೂರು ಶಿವಶಂಕರಪ್ಪ ಓಡಾಡಿದ್ದಾರಾ? ನಾನು ಸರ್ವೆ ಮಾಡುವಾಗ ಮನೆ ಮನೆಗೆ ಓಡಾಡಿದ್ದೇನೆ. ನಮ್ಮ ತಾಲೂಕಿನಲ್ಲಿ ಸರ್ವೆ ಮಾಡುವವರ ಜತೆಗೆ ಮನೆ ಮನೆಗೆ ಹೋಗಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net