

ಶಿವಮೊಗ್ಗ: ದುಬೈನಲ್ಲಿ ಮೇ 31ರಿಂದ ಜೂ.1ರವರೆಗೆ ನಡೆಯುವ ಏಷ್ಯನ್ ಫಿಟ್‌ನೆಸ್ ಏರೋಬಿಕ್ಸ್ ಮತ್ತು ಹಿಪ್‌ಹಾಪ್ ಚಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗದ ಸ್ಟೆಪ್ ಹೋಲ್ಡರ್ಸ್ ನೃತ್ಯ ಸಂಸ್ಥೆಯ ಏಳು ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಮಾಸ್ಟರ್ ಅರುಣ್‌ರಾಜ್ ಶೆಟ್ಟಿ ಹೇಳಿದರು.
ನಮ್ಮ ಸಂಸ್ಥೆಯಲ್ಲಿ ನೃತ್ಯ ಕಲಿಯುತ್ತಿರುವ ಮಕ್ಕಳು ಸತತ 5 ಬಾರಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಮತ್ತು ಎರಡು ಬಾರಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂಡಿಯನ್ ಸ್ಪೋರ್ಟ್ಸ್ ಏರೊಬಿಕ್ಸ್ ಆ್ಯಂಡ್ ಫಿಟ್‌ನೆಸ್ ಫೆಡರೇಷನ್‌ನಿಂದ ದುಬೈನಲ್ಲಿ ನಡೆಯುವ ಚಾಂಪಿಯನ್‌ಶಿಪ್‌ನಲ್ಲಿ 14 ಮತ್ತು 17 ವರ್ಷದೊಳಗಿನ ನಮ್ಮ ಸಂಸ್ಥೆಯ ಅದಿತ್ರಿ, ಚಿರಾಕ್ಷ್, ವಿಶಾಲ್, ನೀರಜ್, ಸುಮಂತ್, ಜೀವಿಕಾ, ಪಾರ್ಥ ಭಾಗವಹಿಸುವರು. ರಾಜ್ಯದಿಂದ 14 ಮಕ್ಕಳು ತೆರಳಲಿದ್ದು, ವಿವಿಧ ರಾಜ್ಯಗಳಿಂದ 117 ಮಕ್ಕಳು ಪಾಲ್ಗೊಳ್ಳುವರು ಎಂದರು.
ಬೆಂಗಳೂರಿನಂದ ಮುಂಬೈಗೆ ಸ್ಪರ್ಧಿಗಳು ತೆರಳಲಿದ್ದು, ಮೂರು ದಿನ ತರಬೇತಿ ನಂತರ ದುಬೈನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವರು ಎಂದರು. ಟೀಂ ಕೋಚ್ ಕಿರಣ್ ಇಕ್ಕೇರಿ, ಅಜಯ್, ಪ್ರಸನ್ನ ಸುದ್ದಿಗೋಷ್ಠಿಯಲ್ಲಿದ್ದರು.