ಮೊಬೈಲ್ ಕದ್ದು ಬ್ಯಾಂಕ್ ಖಾತೆಗೆ ಕನ್ನ

cyber crime
Published on

ಬೆಂಗಳೂರು: ತಂದೆಗೆ ಚಿಕಿತ್ಸೆ ಕೊಡಿಸಲೆಂದು ಬಂದಿದ್ದ ವ್ಯಕ್ತಿಯ ಮೊಬೈಲ್ ಕದ್ದ ಕಳ್ಳರು ಅದನ್ನು ಬಳಸಿ ಬ್ಯಾಂಕ್ ಖಾತೆಯಿಂದ 95 ಸಾವಿರ ರೂ. ದೋಚಿದ್ದಾರೆ.

ತುಮಕೂರಿನ ಬೂಪುರ ಗ್ರಾಮದ ವಸಂತ್‌ಕುಮಾರ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಸಂತ್‌ಕುಮಾರ್, ತನ್ನ ತಂದೆಗೆ ಅನಾರೋಗ್ಯ ಕಾರಣ ಚಿಕಿತ್ಸೆ ಕೊಡಿಸುವ ಸಲುವಾಗಿ ಕಿದ್ವಾಯಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಆತನ ಮೊಬೈಲ್ ಕಳವು ಮಾಡಿದ್ದ ಕಳ್ಳರು, ಆ ೆನ್ ಬಳಸಿಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 95,459 ರೂ. ಅನ್ನು ಬೇರೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net