VIDEO: 'ನೀವು ಮನೇಲೇ ಇರಿ..ಸುರಕ್ಷಿತವಾಗಿರಿ.. ಸುದ್ದಿಯನ್ನು ನಾವು ತಲುಪಿಸ್ತೀವಿ'; ವೈದ್ಯರು, ಪೊಲೀಸರ ಶ್ರಮದ ಬಗ್ಗೆ ಕಾಳಜಿ ಇರಲಿ..ಇದು ವಿಜಯವಾಣಿ-ದಿಗ್ವಿಜಯ ನ್ಯೂಸ್​ ಕಳಕಳಿ

Vijayavani, Dighvijay 16 april 20
Published on

'ನಮ್ಮ ಜೀವ ಉಳಿಸೋದಕ್ಕೆ ವೈದ್ಯರು ತಮ್ಮ ಜೀವನ್ನು ಪಣಕ್ಕೆ ಇಟ್ಟಿದ್ದಾರೆ, ನಾವು ಮನೇಲಿ ಇರಲಿ ಅಂತ ಪೊಲೀಸರು ರೋಡಲ್ಲಿ ನಿಂತಿದ್ದಾರೆ..ಮನೇಲಿ ಇರೋ ನಮಗೆ ಇಡೀ ಜಗತ್ತಿನ ಮಾಹಿತಿ ಸಿಗಲಿ ಅಂತ ಪತ್ರಿಕಾ ಮತ್ತು ಮಾಧ್ಯಮ ಸಿಬ್ಬಂದಿ ನಮಗಾಗಿ ಕೆಲಸ ಮಾಡುತ್ತಿದ್ದಾರೆ...'

ಕರೊನಾ ವೈರಸ್​ ಮಹಾಮಾರಿಯಂತೆ ಕಾಡುತ್ತಿದೆ. ಅದೆಷ್ಟೋ ಜನರ ಪ್ರಾಣವನ್ನೇ ತೆಗೆದಿದೆ. ದಿನದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿಯಂತ್ರಣಕ್ಕಾಗಿ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಮೊದಲ ಹಂತದ ಲಾಕ್​ಡೌನ್ ಅವಧಿ ಸಾಕಾಗದೆ, ಇನ್ನೊಂದು ಅವಧಿಗೂ ವಿಸ್ತರಿಸಲಾಗಿದೆ. ಆದರೆ ಜನರಿಗೆ ಇನ್ನೂ ಸಂಪೂರ್ಣ ಅರಿವು ಬಂದಿಲ್ಲ. ಯಾವುದೋ ನೆಪವೊಡ್ಡಿ ರಸ್ತೆಗಿಳಿಯುತ್ತಾರೆ...ಗುಂಪುಗುಂಪಾಗಿ ಸೇರುತ್ತಾರೆ..

ಆದರೆ ಈ ಎರಡನೇ ಅವಧಿಯಲ್ಲಾದರೂ ಲಾಕ್​ಡೌನ್​ನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂಬುದು 'ವಿಜಯವಾಣಿ-ದಿಗ್ವಿಜಯ ನ್ಯೂಸ್'​ನ ಕಳಕಳಿಯ ಮನವಿ. ವಿಜಯವಾಣಿ ಪತ್ರಿಕೆ, ದಿಗ್ವಿಜಯ ನ್ಯೂಸ್​ ಚಾನಲ್​ ಮತ್ತು​ ವಿಜಯವಾಣಿ.ನೆಟ್​ (https://www.vijayavani.net/) ಗಳು ಕರೊನಾಕ್ಕೆ ಸಂಬಂಧಪಟ್ಟ ಸಮಗ್ರ ಮಾಹಿತಿಯನ್ನು ಪ್ರಕಟಿಸುತ್ತಿವೆ. ಬಿತ್ತರಿಸುತ್ತಿವೆ...ಕ್ಷಣಕ್ಷಣದ ಮಾಹಿತಿಯನ್ನು ನಾವು ನಿಮ್ಮ ಮನೆಗೇ ತಲುಪಿಸುತ್ತೇವೆ..ನೀವು ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net