ಮದ್ಯ ಸೇವನೆಯಿಂದ ದೂರವಿದ್ದು ಸುಖ ಸಂಚಾರ ನಡೆಸಿ

oplus_6291456
oplus_6291456
Published on

ರಾಣೆಬೆನ್ನೂರ: ಕುಡಿತದ ಚಟದಿಂದ ಸುಂದರವಾದ ಬದುಕಿನ ನೆಮ್ಮದಿ ಹಾಳು ಮಾಡಿಕೊಳ್ಳುವುದರ ಮೂಲಕ ಸಮಾಜದಲ್ಲಿ ಗೌರವ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮದ್ಯ ಸೇವನೆಯಿಂದ ದೂರವಿದ್ದು ಸುಖ ಸಂಸಾರ ನಡೆಸಲು ಮುಂದಾಗಬೇಕು ಎಂದು ಗಂಗಾಪುರ ಸಿದ್ಧಾರೂಢ ಮಠದ ಶ್ರೀ ಮರುಳ ಶಂಕರ ಸ್ವಾಮೀಜಿ ಹೇಳಿದರು.

ತಾಲೂಕಿನ ಗಂಗಾಪುರ ಗ್ರಾಮದ ಶ್ರೀ ಸದ್ಗುರು ಸಿದ್ದಾರೂಢ ಆಶ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ವತಿಯಿಂದ ಏರ್ಪಡಿಸಿದ್ದ 1933ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕುಡಿತದ ಚಟವು ಮಾರಕ ರೋಗವಿದ್ದಂತೆ, ಇದೊಂದು ದೊಡ್ಡ ಕಾಯಿಲೆ. ಇಂತಹ ಕಾಯಿಲೆಯಿಂದ ಮುಕ್ತರಾದಾಗ ಮಾತ್ರ ನಿಮ್ಮ ಜೀವನದ ಬದುಕು ಸುಂದರವಾಗಿರಲು ಸಾಧ್ಯ ಎಂದರು.

ಧಾರವಾಡ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಭಾಸ್ಕರ ಎನ್​ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಶ್ರೀ ವೀರೇಂದ್ರ ಹೆಗ್ಗಡೆ ಯವರ ಆಶೀರ್ವಾದದಿಂದ ರಾಜ್ಯದಲ್ಲಿ 1.42 ಲಕ್ಷ ಜನರು ಮದ್ಯ ವ್ಯಸನದಿಂದ ಮುಕ್ತರಾಗಿದ್ದಾರೆ. ಇದರಿಂದಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎಲ್ಲರ ಮನಸ್ಸು ಮತ್ತು ಹೃದಯ ಗೆದ್ದಿದೆ. ಇಲ್ಲಿರುವ ಶಿಬಿರಾಥಿರ್ಗಳು ಕೇವಲ ಮೂರೇ ದಿನಗಳಲ್ಲಿ ಮದ್ಯ ಸೇವನೆ ಬಿಡುವ ವಿಶ್ವಾಸ ವ್ಯಕ್ತಪಡಿಸಿರುವುದು ಶ್ಲಾನೀಯ ಎಂದರು.

ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಮಾತನಾಡಿ, ಕುಡಿತದಿಂದ ಅನೇಕ ಸಂಸಾರಗಳು ಬೀದಿಪಾಲಾಗಿವೆ. ಅಲ್ಲದೆ ಅವರ ಜೀವನ ಬಲಿಕೊಡುವಂತಹ ಸಂದರ್ಭಗಳನ್ನು ನೋಡಿದ್ದೇವೆ. ಇಲ್ಲಿರುವ ಶಿಬಿರಾಥಿರ್ಗಳು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಏಕಾಗ್ರತೆ ಹೊಂದಿ ಕುಡಿತದ ಚಟದಿಂದ ಮುಕ್ತರಾಗಬೇಕು. ಅಂದಾಗ ನಿಮ್ಮ ಹೊಸಜೀವನ ಪ್ರಾರಂಭವಾಗುತ್ತದೆ ಎಂದರು.

ತಾಲೂಕು ಯೋಜನಾಧಿಕಾರಿ ಮಂಜುನಾಥ ಎಂ.ಪಿ. ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಮುತ್ತಣ್ಣ ಯಲಿಗಾರ, ಗ್ರಾಪಂ ಅಧ್ಯಕ್ಷೆ ಶೃತಿ ಕಮ್ಮಾರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಸವರಾಜ ಹುಲ್ಲತ್ತಿ, ಬುಳಪ್ಪ ಬಣಕಾರ, ನಿತ್ಯಾನಂದ ಕುಂದಾಪುರ, ಮಲ್ಲಿಕಾರ್ಜುನ ಕಲಾಲ, ರಾಮಚಂದ್ರಪ್ಪ ರಾಯರಡ್ಡಿ, ಹಾಲಪ್ಪ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net