

ಬೆಂಗಳೂರು: ರೈತರಿಗೆ ನೆರವಾಗಬೇಕು ಎಂಬ ನೆಪವೊಡ್ಡಿ ನಂದಿನಿ ಹಾಲಿನ ದರ ಹೆಚ್ಚಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಹಾಲು ಪ್ರಕೋಷ್ಠ ರಾಜ್ಯ ಸಂಚಾಲಕ ರಾಘವೇಂದ್ರಶೆಟ್ಟಿ ಎಚ್ಚರಿಸಿದ್ದಾರೆ.
ಗ್ರಾಹಕರು ಕೇಳದೆ ಇದ್ದರೂ ಕಳೆದ ಜೂನ್‌ನಲ್ಲಿ 50 ಎಂಎಲ್ ಹೆಚ್ಚಿಗೆ ನೀಡಿ, ಲೀಟರ್‌ಗೆ 2.10 ರೂ. ಹೆಚ್ಚಿಸಲಾಗಿದೆ. ಹೆಚ್ಚುವರಿ ಹಾಲು ವಿಲೇವಾರಿಗೆ ಈ ಕ್ರಮ ಅನಿವಾರ್ಯವೆಂದು ಮೊಂಡುತನದಿಂದ ತನ್ನ ನಿರ್ಧಾರ ಸಮರ್ಥಿಸಿಕೊಂಡಿತು.
ಈಗಾಗಲೇ ಪೆಟ್ರೋಲ್, ಡೀಸೆಲ್, ವಿದ್ಯುತ್, ಮುದ್ರಾಂಕ ಶುಲ್ಕ ಮತ್ತಿತರ ದರಗಳನ್ನು ಹೆಚ್ಚಿಸಿದ್ದಲ್ಲದೆ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬರೆ ಎಳೆಯಲು ಮುಂದಾಗಿರುವುದನ್ನು ಒಪ್ಪುವುದಿಲ್ಲ. ಬೆಲೆ ಏರಿಕೆ ನಿಲುವಿಗೆ ಅಂಟಿಕೊಂಡರೆ ಗ್ರಾಹಕರ ಪರವಾಗಿ ಬಿಜೆಪಿ ಹೋರಾಡಲಿದೆ.
ರೈತರ ಕಷ್ಟ-ನಷ್ಟಗಳಿಗೆ ಸ್ಪಂದಿಸಬೇಕೆಂಬ ನೈಜ ಕಾಳಜಿ ಸರ್ಕಾಕ್ಕಿದ್ದರೆ, ಹಾಲು ಕೇಂದ್ರಗಳಲ್ಲಿ ಆಗುತ್ತಿರುವ ಮೋಸ ತಡೆದು, ಪ್ರೋತ್ಸಾಹಧನ ಬಾಕಿ ಮೊತ್ತ 865 ಕೋಟಿ ರೂ. ಬಿಡುಗಡೆ ಮಾಡಬೇಕು.
ಹಾಲಿನ ಕೇಂದ್ರಗಳಿಗೆ ರೈತರು 100 ಲೀಟರ್ ಹಾಲು ನೀಡಿದರೆ ಗುಡ್ ಮಿಲ್ಕ್, ್ಯಾಟ್ ಮಿಲ್ಕ್, ಗುಣಮಟ್ಟ ಸರಿಯಿಲ್ಲ ಇತ್ಯಾದಿ ಹೆಸರಿನಲ್ಲಿ ಕೇವಲ 40 ಲೀಟರ್‌ಗೆ ಪ್ರೋತ್ಸಾಹಧನ ನೀಡಿ, ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗೋವಿನ ಆಹಾರವಾದ ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಮೇವು ಸಮೃದ್ಧವಾಗಿ ಸಿಗದೆ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಹಾಲಿನ ಪ್ರೋತ್ಸಾಹಧನ ಲೀಟರ್‌ಗೆ ಏಳು ರೂ.ಗೆ ಹೆಚ್ಚಿಸುವ ಭರವಸೆ ಈಡೇರಿಸಿ ನೆರವಾಗಬೇಕು ಎಂದು ರಾಘವೇಂದ್ರಶೆಟ್ಟಿ ಒತ್ತಾಯಿಸಿದ್ದಾರೆ.