ಸನಾತನ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆ ತಿರುಚಲಾಗಿದೆ: ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್​ |Udhayanidhi Stalin

untitled-design-2025-09-04t111039189-68b9266c9345b
Published on

Udhayanidhi Stalin : ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ನೀಡುವ ಮೂಲಕ ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್​ ದೇಶಾದ್ಯಂತ ವಿವಾದ ಸೃಷ್ಟಿಸಿ ಸುಮಾರು 2 ವರ್ಷಗಳ ಕಳೆದ ನಂತರ, ಇದೀಗ ಜನರಲ್ಲಿ ಕೋಮು ಗಲಭೆ ಸೃಷ್ಟಿಸಲು ಈ ಹೇಳಿಕೆಯನ್ನು ಗುಂಪೊಂದು ತಿರುಚಲಾಗಿದೆ ಎಂದು ಹೇಳಿದ್ದಾರೆ.

ಫ್ಯಾಕ್ಟ್​ ಚೆಕ್​ ಯೂನಿಟ್​ ಕಾರ್ಯಕ್ರಮದಲ್ಲಿ ಸ್ಟಾಲಿನ್​ ಭಾಗಿ

ತಮಿಳುನಾಡು ಫ್ಯಾಕ್ಟ್​ ಚೆಕ್​ ಯೂನಿಟ್​ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಟಾಲಿನ್​ ನಾನು ನೀಡಿದ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಗುಂಪೊಂದು ತಿರುಚಲಾಗಿದೆ ಮತ್ತು ದೇಶಾದ್ಯಂತ ಸುಳ್ಳು ಸುದ್ಧಿಯನ್ನು ಹರಡಲಾಗಿದೆ ಎಂದು ಆರೋಪಿಸಿದ್ದಾರೆ.

2 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆ ಏನಾಗಿತ್ತು?

ಎರಡು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಸಮಾನರು, ಹುಟ್ಟಿನಿಂದ ಯಾರನ್ನೂ ಮೇಲೆ ಅಥವಾ ಕೆಳಗೆ ಎಂದು ಪರಿಗಣಿಸಲಾಗುವುದಿಲ್ಲ. ಹಾಗೆ ಅಂತಹದ್ದೇನಾದರೂ ಇದ್ದರೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದೆ. ಆದರೆ ಈ ಹೇಳಕೆಯನ್ನು ಒಂದು ಗುಂಪು ಉದ್ದೇಶಪೂವರ್ಕವಾಗಿ ತಿರುಚಿದ್ದು, ನಾನು ನರಮೇಧಕಕ್ಕೆ ಕರೆ ನೀಡಿದ್ದೇನೆ ಎಂಬ ನಕಲಿ ಸುದ್ದಿಯನ್ನು ದೇಶಾದ್ಯಂತ ಹರಡಲಾಯಿತು ಎಂದು ಹೇಳಿದ್ದಾರೆ.

ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಈ ಸುಳ್ಳುಗಳು ಸತ್ಯಕ್ಕಿಂತ ಎರಡು ಪಟ್ಟು ವೇಗವಾಗಿ ಹರಡುತ್ತಿವೆ. ಜನರ ದಾರಿ ತಪ್ಪಿಸಲು ಮತ್ತು ವಿಭಜನೆಗಳನ್ನು ಉತ್ತೇಜಿಸಲು ಭಾರತದಲ್ಲಿರುವ ಒಂದು ಫ್ಯಾಸಿಸ್ಟ್​ ಗುಂಪು ಇದೆ. ಇದನ್ನು ಯಾರು ಮಾಡಿದ್ದಾರೆ ಎಂದು ಹೇಳುವುದು ಬೇಡ. ಈ ರೀತಿಯ ಸುಳ್ಳು ಸುದ್ದಿಗಳು ಜನರಲ್ಲಿ ಗೊಂದಲ ಉಂಟು ಮಾಡುತ್ತವೆ ಎಂದು ಸ್ಟಾಲಿನ್​ ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net