ಭೂಮಾಪಕ ನೇಮಕಾತಿ ಪರೀಕ್ಷೆ: 5 ಕೃಪಾಂಕ ಘೋಷಿಸಿದ ಕೆಇಎ

ಉಳಿಕೆ ಮೂಲವೃಂದದ ಭೂಮಾಪಕರ ಹುದ್ದೆಗೆ ಕಳೆದ ಶುಕ್ರ್ರವಾರ (ಅ.2) ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಮೊದಲ ಪತ್ರಿಕೆಯಾದ ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಒಟ್ಟು ಮೂರು ಪ್ರಶ್ನೆಗಳಿಗೆ ತಪ್ಪು ಆಯ್ಕೆಗಳನ್ನು ನೀಡಲಾಗಿದ್ದು, ಇವುಗಳಿಗೆ ಕೃಪಾಂಕ ಘೋಷಿಸಿದೆ. ನಾಲ್ಕು ಪ್ರಶ್ನೆಗಳ ಉತ್ತರಗಳನ್ನು ಬದಲಾವಣೆ ಮಾಡಲಾಗಿದೆ.
Karnataka Examinations Authority
ಕರ್ನಾಟಕ ಪರೀಕ್ಷಾ ಪ್ರಾಧಿಕಾರ Google
Published on: 

ಬೆಂಗಳೂರು: ಭೂಮಾಪಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ ಐದು ಕೃಪಾಂಕಗಳನ್ನು ನೀಡಲಾಗಿದೆ.

ಕೆಇಎ ಪರಿಷ್ಕೃತ ಸರಿಯುತ್ತರಗಳನ್ನು ಪ್ರಕಟಿಸಿದ್ದು, ಎರಡೂ ಪತ್ರಿಕೆಗಳಲ್ಲಿ ಒಟ್ಟಾರೆ ಐದು ಪ್ರಶ್ನೆಗಳಿಗೆ ‘ಗ್ರೇಸ್’ ಮಾರ್ಕ್ಸ್’ ಎಂದು ನಮೂದಿಸಿದೆ.

ಉಳಿಕೆ ಮೂಲವೃಂದದ ಭೂಮಾಪಕರ ಹುದ್ದೆಗೆ ಕಳೆದ ಶುಕ್ರ್ರವಾರ (ಅ.2) ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಮೊದಲ ಪತ್ರಿಕೆಯಾದ ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಒಟ್ಟು ಮೂರು ಪ್ರಶ್ನೆಗಳಿಗೆ ತಪ್ಪು ಆಯ್ಕೆಗಳನ್ನು ನೀಡಲಾಗಿದ್ದು, ಇವುಗಳಿಗೆ ಕೃಪಾಂಕ ಘೋಷಿಸಿದೆ. ನಾಲ್ಕು ಪ್ರಶ್ನೆಗಳ ಉತ್ತರಗಳನ್ನು ಬದಲಾವಣೆ ಮಾಡಲಾಗಿದೆ.

ಇನ್ನು, ಎರಡನೇ ಪತ್ರಿಕೆಯಲ್ಲಿ ಎರಡು ಕೃಪಾಂಕ ನೀಡಿದ್ದು, ನಾಲ್ಕು ಉತ್ತರಗಳನ್ನು ಮಾರ್ಪಡಿಸಲಾಗಿದೆ. ಜತೆಗೆ, ಎರಡು ಉತ್ತರಗಳಿಗೆ ಪರ್ಯಾಯ ನೀಡಲಾಗಿದೆ. ಎರಡೂ ಪತ್ರಿಕೆಗಳಿಂದ ಒಟ್ಟಾರೆ 15 ಉತ್ತರಗಳಲ್ಲಿ ಬದಲಾವಣೆ ಮಾಡಿದಂತಾಗಿದೆ.

ಪರಿಷ್ಕೃತ ಸರಿಯುತ್ತರಗಳ ಆಧಾರದಲ್ಲಿ ತಾತ್ಕಾಲಿಕ ಫಲಿತಾಂಶ ಘೋಷಿಸಲಾಗಿದ್ದು, ಇದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಒಟ್ಟಾರೆ 750 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net