ಪ್ರಭಾರಿ ಸಿಇಒ ಸ್ಥಾನದಲ್ಲಿರುವ ಜಿಲ್ಲಾಧಿಕಾರಿಗಳಿಗೆ ಅವರದೇ ಕೆಲಸ-ಕಾರ್ಯಗಳು ಬಹಳಷ್ಟಿದ್ದು, ಜಿಪಂಗೆ ಬಂದು ಆಡಳಿತ ನಡೆಸುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಕಾರಣ ಗ್ರಾಮ ಪಂಚಾಯಿತಿ ಸೇರಿ ೨೮ ವಿವಿಧ ಇಲಾಖೆಗಳು ಜಿಪಂ ಅಧಿನಕ್ಕೆ ಒಳಪಡುತ್ತವೆ. ಹೆಚ್ಚೂ-ಕಮ್ಮಿ ನಗರ ಪ್ರದೇಶ ಬಿಟ್ಟರೆ ಜಿಲ್ಲೆಯ ಸಮಸ್ತ ಹಳ್ಳಿಗಳ ಅಭಿವೃದ್ಧಿ ಸೇರಿ ಸಮಾಜ ಕಲ್ಯಾಣ, ಶಾಲಾ ಶಿಕ್ಷಣ, ಕೃಷಿ, ಹಿಂದುಳಿದ ಇಲಾಖೆ ಹೀಗೆ ಮಹತ್ವದ ಮತ್ತು ಜನಸಂಪರ್ಕ ಕಚೇರಿಗಳು ಜಿಪಂ ವ್ಯಾಪ್ತಿಗೆ ಬರಲಿದ್ದು, ಇವೆಲ್ಲವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಲು ಐಎಎಸ್ ಅಽಕಾರಿಯೇ ಸಿಇಒ ಆಗಿ ಕರ್ತವ್ಯ ನಿರ್ವಹಿಸುವುದು ಅಗತ್ಯವಿದೆ. ಇದುವರೆಗೆ ಹಾಗೆಯೇ ನಡೆದುಕೊಂಡು ಬಂದಿದೆ. ಆದರೀಗ ಬರಗಾಲದಂತಹ ಕಠಿಣ ಸಮಯದಲ್ಲಿ ಜಿಪಂಗೆ ಕಾಯಂ ಸಿಇಒ ತಿಂಗಳಾದರೂ ಇಲ್ಲವೆಂದರೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.