

ಸೂಲಿಬೆಲೆ :
ವಿದ್ಯಾಭ್ಯಾಸದ ಜತೆಗೆ ಯುವಕರು ಕ್ರೀಡಾ ಮನೋಭಾವ ಬೆ
ಳೆ
ಸಿಕೊಳ್ಳಬೇಕು ಎಂದು ಒಕ್ಕಲಿಗ ಸಂದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು.
ಸೂಲಿಬೆಲೆಯ ಲೆವೆನ್ ಸ್ಟಾರ್ ಕ್ರೀಕೆಟರ್ಸ್ನಿಂದ ಹಮ್ಮಿಕೊಂಡಿದ್ದ ಲೆವೆನ್ ಸ್ಟಾರ್ ಕ್ರಿಕೆಟ್ ಟೂರ್ನ್ಮೆಂಟ್ ಸೀಸನ್&1 ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಶಿಕ್ಷಣ ವಿದ್ಯಾರ್ಥಿಗಳ ವೃತ್ತಿಪರ ಬದುಕಿನ ಹಾದಿಗೆ ಬುನಾದಿಯಾದರೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದರು.
ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಜನಾರ್ದನ ರೆಡ್ಡಿ, ಸದಸ್ಯ ನರಸಿಂಹಮೂರ್ತಿ, ಗ್ಯಾರಂಟಿ ಸಮಿತಿ ಜಿಲ್ಲಾ ಸದಸ್ಯ ಸೈಯದ್ ಮೆಹಬೂಬ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ತಿರುಮಲ ಎಂಟರ್ಪ್ರೆಸಸ್ ಬಿ.ಎಂ.ಬಸವರಾಜ್, ಮುಖಂಡ ಎಸ್.ವೈ.ನಾಗರಾಜ್, ಮುರುಳಿ, ಮುನೇಂದ್ರ, ಮುನಿರಾಜು ಇದ್ದರು.
ಪಂದ್ಯಾವಳಿ ವಿಜೇತರು :
ಹೊಸಕೋಟೆ ತಾಲೂಕಿನ ಲಾಲ್ಬಾಗ್ ದಾಸರಹಳ್ಳಿ ಸಿಂಧೂರಿ ತಂಡ ಪ್ರಥಮ ಬಹುಮಾನವಾಗಿ 70 ಸಾವಿರ ನಗದು ಹಾಗೂ ಟ್ರೋಫಿ ಪಡೆಯಿತು. ದ್ವೀತಿಯ ಬಹುಮಾನವಾಗಿ 35 ಸಾವಿರ ನಗದು ಹಾಗೂ ಟ್ರೋಫಿಯನ್ನು ಸೂಲಿಬೆಲೆ ಲೆವೆನ್ ಸ್ಟಾರ್ ಕ್ರಿಕೆಟರ್ ತಂಡ ತನ್ನದಾಗಿಸಿಕೊಂಡಿತು. ಹರಳೂರಿನ ಎಚ್.ಸಿ.ಸಿ ತಂಡ 20 ಸಾವಿರ ನಗದು ಮತ್ತು ಟ್ರೋಪಿಯನ್ನು ಪಡೆಯುವ ಮೂಲಕ 3ನೇ ಬಹುಮಾನ ಪಡೆಯಿತು. ಬೆಸ್ಟ್ ಬೌಲರ್ ಹೃತಿಕ್ ಗೌಡ, ಬೆಸ್ಟ್ ಬ್ಯಾಟ್ಸ್ಮೆನ್ ನವೀನ್, ಮ್ಯಾನ್ ಅಪ್ ದಿ ಮ್ಯಾಚ್ ಜಗದೀಶ್ ಪಡೆದುಕೊಂಡರು.