ಯುವಕರೇ ಭವ್ಯ ಭಾರತದ ಬುನಾದಿ great India

ಯುವಕರೇ ಭವ್ಯ ಭಾರತದ ಬುನಾದಿ great India
ಯುವಕರೇ ಭವ್ಯ ಭಾರತದ ಬುನಾದಿ great India
Published on
ಮುಳಬಾಗಿಲು: ಆರೋಗ್ಯವಂತ ಯುವ ಸಮಾಜ, ಭವ್ಯ ಭಾರತದ ಭದ್ರ ಬುನಾದಿಯಾಗಿದ್ದು, ಬೀಡಿ, ಸಿಗರೇಟ್​, ಗುಟ್ಖಾ ಸೇವನೆಯಿಂದ ದೂರ ಉಳಿಯಬೇಕು. ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಆರೋಗ್ಯವಂತ ಜೀವನ ನಡೆಸಬೇಕು ಹಾಗಾಗಿ ಮಾದಕ ವಸ್ತುಗಳಿಂದ ದೂರವಿರಿ ಎಂದು ಜೆಎಂಎಫ್​ಸಿ ಕಿರಿಯ ಶ್ರೇಣಿ ಪ್ರಧಾನ ಸಿವಿಲ್​ ನ್ಯಾಯಾಧೀಶ ಜಿ.ಹರೀಶ್​ ಸಲಹೆ ನೀಡಿದರು. great India
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ತಂಬಾಕು ನಿಷೇಧ ದಿನ ಅಂಗವಾಗಿ ಕಾನೂನು ಅರಿವು-&ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯಕ್ಕೆ ತೀವ್ರ ಹಾನಿ. ಯುವಕರು ಇಂಥ ದುಶ್ಚಟಗಳಿಗೆ ಬಲಿಯಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳಬೇಡಿ. ಮಾದಕ ವ್ಯಸನ ಸಮಾಜ ಘಾತುಕ ಎಂದು ಹೇಳಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ಸದಾಶಿವಯ್ಯ ಮಾತನಾಡಿ, ಜಾಗತಿಕವಾಗಿ ತಂಬಾಕು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ವಿಶ್ವದಲ್ಲಿ ಪ್ರತಿ 10 ಜನರಲ್ಲಿ ಒಬ್ಬರ ಸಾವಿಗೆ ತಂಬಾಕು ಕಾರಣವಾಗಿದೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಗುಟ್ಖಾ, ಬೀಡಿ, ಸಿಗರೇಟ್​ ಸೇವನೆ ಹಾಗೂ ಮಾರಾಟ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ಕ್ರಮದ ಜತೆಗೆ 500 ರಿಂದ -3,000 ರೂ. ವರೆಗೆ ದಂಡ ವಸೂಲಿ ಮಾಡಬಹುದು ಎಂದು ತಿಳಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರಮೇಶ್​, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷಿ$್ಮದೇವಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ್​, ಆರೋಗ್ಯ ಆಪ್ತ ಸಮಾಲೋಚಕ ವಿ.ರಮೇಶ್​, ಇಲಾಖೆ ಸಿಬ್ಬಂದಿ ಮತ್ತು ರಾಮಾನುಜಾಚಾರ್ಯ, ಪ್ಯಾರಾ ಮೆಡಿಕಲ್​ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net