ಮುಳಬಾಗಿಲು: ನಗರದ ಕುರುಬರ ಪೇಟೆ ಬಡಾವಣೆಯ ಮನೆಯಲ್ಲಿ ಮಂಗಳವಾರ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನವ್ಯಾ(20) ಮೃತೆ.. ಪಾಲಕರು ನೂಗಲಬಂಡೆಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದು ರಾತ್ರಿ 10 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿಕೊಂಡು ಮನೆಗೆ ಬಂದಾಗ, ನವ್ಯ ಕೋಣೆಯಲ್ಲಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಮುಳಬಾಗಿಲು ನಗರ ಠಾಣೆಗೆ ದೂರು ನೀಡಿರುವ ಪಾಲಕರು ಕಾರಣಗಳಿಲ್ಲದೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.