ಜೂ.16ರ ಸಂಜೆ ಜ್ವರದಿಂದ ಬಳಲುತ್ತಿದ್ದ ಮಗನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರ ಸಲಹೆ ಮೇರೆಗೆ ರಕ್ತ ಪರೀಕ್ಷೆ ಸೇರಿ ಹಲವು ಪರೀಕ್ಷೆಗಳನ್ನು ಮಾಡಿಸಲಾಯಿತು. ವರದಿಯಲ್ಲಿ ಎಲ್ಲವೂ ನಾರ್ಮಲ್ ಎಂದಿತ್ತು. ಆದರೆ, ಜ್ವರ ವಾಸಿಯಾಗದ ಕಾರಣ ವೈದ್ಯರು ಬೇರೆ ಸಮಸ್ಯೆ ಇರುಬಹುದು. ಇಎಸ್‌ಐ ಆಸ್ಪತ್ರೆಯಲ್ಲಿ ತೋರಿಸಿ ಎಂದು ಸೂಚಿಸಿದರು. ಅದರಂತೆ ಜೂ. 26ರಂದು ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲ ಪರೀಕ್ಷೆಗಳನ್ನು ಮಾಡಿದ ವೈದ್ಯರು ತಲೆ ಮತ್ತು ಬೆನ್ನಿನಲ್ಲಿ ನೀರು ತುಂಬಿದೆ ಎಂದೇಳಿ ನೀರು ತೆಗೆದರು. ನಂತರದಲ್ಲಿ ಸೊಂಟ, ಕೈಕಾಲು ಅಲುಗಾಡಿಸಲು ಆಗದೆ ಹಾಸಿಗೆ ಹಿಡಿದಿದ್ದಾನೆ ಎಂದು ಗೋಳಿಟ್ಟಿದ್ದಾರೆ.