ಸಂಚಾರ ನಿಯಮಗಳನ್ನು ಗಾಳಿಗೆ ತೂರಿದಲ್ಲದೆ ಸಿಗ್ನಲ್​ನಲ್ಲಿ ಡ್ರ್ಯಾಗರ್​ ಹಿಡಿದು ಬೆದರಿಕೆ ಹಾಕಿದ ಯುವಕ! Traffic Rules

ಸಿಗ್ನಲ್​ನಲ್ಲಿ ಡ್ರ್ಯಾಗರ್​ ಹಿಡಿದು ಬೆದರಿಕೆ ಹಾಕಿದ ಯುವಕ
ಸಿಗ್ನಲ್​ನಲ್ಲಿ ಡ್ರ್ಯಾಗರ್​ ಹಿಡಿದು ಬೆದರಿಕೆ ಹಾಕಿದ ಯುವಕ
Published on

ಪ್ರಮುಖ ಮುಖ್ಯಾಂಶಗಳು

  • ಸಂಚಾರ ನಿಯಮಗಳನ್ನು ಗಾಳಿಗೆ ತೂರಿದಲ್ಲದೆ, ಟ್ರಾಫಿಕ್​ ಸಿಗ್ನಲ್​ನಲ್ಲೇ ಗಲಾಟೆ ಮಾಡಿದ ದುಷ್ಕರ್ಮಿ
  • ನಿನ್ನೆ ಸಂಜೆ ನಡುರಸ್ತೆಯಲ್ಲಿ ಡ್ರ್ಯಾಗರ್ ಹಿಡಿದು ಕಾರು ಚಾಲಕನಿಗೆ ಅವಾಜ್ ಹಾಕಿದ ಯುವಕ
  • KA53JB3274 ನೋಂದಣಿ ಸಂಖ್ಯೆಯ ಬೈಕ್ ಚಾಲಕ ಈ ದುರ್ವರ್ತನೆ ತೋರಿದ್ದಾನೆ
ಬೆಂಗಳೂರು: ದುಷ್ಕರ್ಮಿಯೊಬ್ಬ ಸಂಚಾರ ನಿಯಮಗಳನ್ನು ( Traffic Rules ) ಗಾಳಿಗೆ ತೂರಿದಲ್ಲದೆ, ಟ್ರಾಫಿಕ್​ ಸಿಗ್ನಲ್​ನಲ್ಲೇ ಗಲಾಟೆ ಮಾಡಿ, ಡ್ರ್ಯಾಗರ್​ ಹಿಡಿದು ಬೆದರಿಕೆ ಹಾಕಿರುವಂತಹ ಆಘಾತಕಾರಿ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಈ ಘಟನೆ ನಿನ್ನೆ (ಜ.16) ಸಂಜೆ 6 ಗಂಟೆಗೆ ವೈಟ್ ಫೀಲ್ಡ್ ವಿಭಾಗದಲ್ಲಿ ನಡೆದಿದೆ. ದುಷ್ಕರ್ಮಿಯೊಬ್ಬ ನಡುರಸ್ತೆಯಲ್ಲಿ ಡ್ರ್ಯಾಗರ್ ಹಿಡಿದು ಕಾರು ಚಾಲಕನಿಗೆ ಅವಾಜ್ ಹಾಕಿದ್ದಾನೆ. KA53JB3274 ನೋಂದಣಿ ಸಂಖ್ಯೆಯ ಬೈಕ್ ಚಾಲಕ ಈ ದುರ್ವರ್ತನೆ ತೋರಿದ್ದಾನೆ.
ಅರ್ಬಾಜ್ ಖಾನ್ ಎಂಬಾತನ ಹೆಸರಲ್ಲಿ ಬೈಕ್​ ನೋಂದಣಿಯಾಗಿದೆ. ಸಿಗ್ನಲ್ ನಲ್ಲಿದ್ದಾಗ ಕಾರು ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ ನಡೆದಿದೆ. ಸೊಂಟದಲ್ಲಿ ಡ್ರ್ಯಾಗರ್ ಸಿಕ್ಕಿಸಿಕೊಂಡು ಬೈಕ್ ಚಲಾಯಿಸ್ತಿದ್ದ ದುಷ್ಕರ್ಮಿ, ಏಕಾಏಕಿ ಬೈಕ್​ನಿಂದ ಇಳಿದು ಬಂದು, ಕೈಯಲ್ಲಿ ಚಾಕು ಹಿಡಿದು ಕಾರಿನಲ್ಲಿದ್ದವರಿಗೆ ಆವಾಜ್ ಹಾಕಿದ್ದಾನೆ.
ಅವಾಚ್ಯ ಪದಗಳಿಂದ ಕಾರು ಚಾಲಕನ ನಿಂದಿಸಿ ಬೆದರಿಕೆ ಹಾಕಿರೋ ಆರೋಪ ಯುವಕನ ವಿರುದ್ಧ ಕೇಳಿಬಂದಿದೆ. ಈ ಘಟನೆಯ ದೃಶ್ಯಾವಾಳಿ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಆಧರಿಸಿ ಘಟನೆಯ ಬಗ್ಗೆ ಬೆಂಗಳೂರು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net