ಯುವಕ ಕೆಲಸಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗಿದ್ದು, ತಿರುವು ರಸ್ತೆಯಲ್ಲಿ ವಾಹನವನ್ನು ತಿರುಗಿಸಿಕೊಳ್ಳಲು ಹೋಗಿ ರಸ್ತೆ ಎದುರು ದಿಕ್ಕಿನಲ್ಲಿರುವ ಮರಕ್ಕೆ ಡಿಕ್ಕಿಯಾಗಿ ಮುಖ ಮತ್ತು ತಲೆಗೆ ತೀವ್ರವಾಗಿ ಪೆಟ್ಟುಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾನೆ.ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ನವೀನ್ ಕುಮಾರ್ ಒಬ್ಬನೇ ಮಗನಾಗಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತು.ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.