ಇದು ಭಾರತವಲ್ಲ, ಪಾಕಿಸ್ತಾನವೆಂದು ಆತ್ಮಹತ್ಯೆಗೆ ಮುಂದಾದ ಯುವಕ

ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ
ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ
Published on

ಪ್ರಮುಖ ಮುಖ್ಯಾಂಶಗಳು

  • ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೃತ್ಯ ನಡೆದಿದೆ
  • ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ಇದು ಭಾರತವಲ್ಲ ಪಾಕಿಸ್ತಾನ, ಎಲ್ಲರೂ ಮೋಸಗಾರರು. ನಾವು ಮಾತ್ರ ತಿರಂಗಾ ಹಿಡಿದು ತಿರುಗಾಡುತ್ತೇವೆ ಎಂದು ಕೂಗಾಡುತ್ತಾ ಶನಿವಾರ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಯುವಕನನ್ನು ಬಿಹಾರ ಮೂಲದವ ಎಂದು ಗುರುತಿಸಲಾಗಿದೆ. ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಹಾಗಾಗಿ ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ uniform ಧರಿಸಿ ಬಸ್ ನಿಲ್ದಾಣದಲ್ಲಿ ಸಂಚರಿಸುತ್ತಿದ್ದವರನ್ನು ನೋಡುತ್ತಾ ಕುಳಿತಿದ್ದ ಯುವಕ, ಏಕಾಏಕಿ platform ಬಳಿ ಬಂದು ಚಾಕುವಿನಿಂದ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಮೋಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಚಾಕುವಿನಿಂದ ಕುತ್ತಿಗೆ ಕುಯ್ದುಕೊಳ್ಳುತ್ತಿದ್ದಂತೆ ಸ್ಥಳೀಯರು ಆತನನ್ನು ತಡೆದಿದ್ದಾರೆ. ಸ್ಥಳಕ್ಕೆ ದಾವಿಸಿದ ಪೊಲೀಸರು ಆತನನ್ನು ಕರೆದೊಯ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ನಿಮ್ಹಾನ್ಸ್ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಊರಿನ ಹೆಸರು ಸರಿಯಾಗಿ ಹೇಳುತ್ತಿಲ್ಲ:

ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಒಂದು ಸಲ ಬಿಹಾರ ಮತ್ತೊಂದು ಸಲ ತಮಿಳುನಾಡು ಎಂದು ಹಿಂದಿ ಭಾಷೆಯಲ್ಲಿ ಹೇಳುತ್ತಿದ್ದಾನೆ. ಆತನ ಬಳಿ ಯಾವುದೇ ಗುರುತಿನ ದಾಖಲೆಗಳು ಸಿಕ್ಕಿಲ್ಲ ಹಾಗಾಗಿ ಅವನನ್ನು ಬಿಹಾದವ ಎಂದು ಶಂಕಿಸಲಾಗಿದೆ. ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net