ಕೌಶಲವಿಲ್ಲದೆ ದೊರಕದು ಉದ್ಯೋಗ

ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹಣಕಾಸು ಕ್ಲಬ್​ನ ಕರಪತ್ರ ಬಿಡುಗಡೆ ಮಾಡಿದರು. ಡಾ.ಪಾಂಡುರಂಗ ಪತ್ತಿ, ಡಾ.ಗಣಪತಿ ಸಿನ್ನೂರ, ಪ್ರೊ.ಎ.ಎನ್​.ವಿಜಯಕುಮಾರ, ನಾಗೇಂದ್ರ ಎನ್​.ವಿ., ಅನಿತಾ ಗಾಂಧಿ, ಡಾ.ಜೋಹೇರ್​ ಇತರರಿದ್ದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹಣಕಾಸು ಕ್ಲಬ್​ನ ಕರಪತ್ರ ಬಿಡುಗಡೆ ಮಾಡಿದರು. ಡಾ.ಪಾಂಡುರಂಗ ಪತ್ತಿ, ಡಾ.ಗಣಪತಿ ಸಿನ್ನೂರ, ಪ್ರೊ.ಎ.ಎನ್​.ವಿಜಯಕುಮಾರ, ನಾಗೇಂದ್ರ ಎನ್​.ವಿ., ಅನಿತಾ ಗಾಂಧಿ, ಡಾ.ಜೋಹೇರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಯುಕೆ ಕುಲಪತಿ ಪ್ರೊ.ಬಟ್ಟು ಅನಿಸಿಕೆ
  • ಹಣಕಾಸು ವಲಯದ ಇತ್ತೀಚಿನ ಬೆಳವಣಿಗೆ ವಿಚಾರ ಸಂಕಿರಣ
ಕಲಬುರಗಿ: ಉದ್ಯೋಗ ಪಡೆಯಲು ಕೌಶಲ ಬಹಳ ಮುಖ್ಯ. ಹಣಕಾಸಿನ ಕೌಶಲ ಅಪೇತ ಉದ್ಯೋಗ ದೊರಕಿಸಿಕೊಳ್ಳಲು ನೆರವಾಗುವುದರ ಜತೆಗೆ ಸ್ವಂತ ಉದ್ಯಮಿ ಆಗಲು ಪೂರಕವಾಗಲಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿವಿಯಲ್ಲಿ ವ್ಯವಹಾರ ಅಧ್ಯಯನ ವಿಭಾಗ ಸೋಮವಾರ ಏರ್ಪಡಿಸಿದ್ದ ಹಣಕಾಸು ವಲಯದ ಬದಲಾದ ಸನ್ನಿವೇಶ: ಇತ್ತೀಚಿನ ಬೆಳವಣಿಗೆ ಮತ್ತು ವೃತ್ತಿ ನಿರೀೆಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ವಿಭಾಗದ ಹಣಕಾಸು ಕ್ಲಬ್​ಗೂ ಚಾಲನೆ ನೀಡಿದ ಅವರು, ವಿವಿಯಿಂದ ಹೊರಹೋಗುವಾಗ ಪ್ರತಿಯೊಬ್ಬ ವಿದ್ಯಾರ್ಥಿ ಉದ್ಯೋಗದೊಂದಿಗೆ ಹೋಗಬೇಕು. ಈ ಕ್ಲಬ್​ ಅಡಿ ಎಂಬಿಎ ಇತರ ವಿಷಯದ ವಿದ್ಯಾರ್ಥಿಗಳು, ಹಣಕಾಸು ಸಲಹೆಗಾರರು ಮತ್ತು ಹೂಡಿಕೆ ಕೌಶಲ ಪಡೆಯಲು ಪೂರಕವಾಗಲಿದೆ ಎಂದರು.
ಹಣಕಾಸು ಮಾರುಕಟ್ಟೆಗಳು ಯಾರ ನಿಯಂತ್ರಣದಲ್ಲಿರದೆ ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಟನೆಗಳಿಂದ ಪ್ರಭಾವಿತವಾಗಿವೆ. ಹೀಗಾಗಿ ಹಣಕಾಸು ಸಲಹೆಗಾರರ ಕೆಲಸ ತುಂಬ ಸವಾಲಿನದು. ಚಿನ್ನದ ಬೆಲೆ ಎಷ್ಟು ಅಸ್ಥಿರವಾಗಿದೆ ಎಂಬುದನ್ನು ನೋಡಿದರೆ ಅದರ ಬೆಲೆಯ ಚಲನೆ ಊಹಿಸುವುದು ಮತ್ತು ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ತುಂಬ ಕಷ್ಟ. ಆದರೆ ನೀವು ಈ ರೀತಿಯ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದಾದ ಎಲ್ಲ ಕೌಶಲ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ವ್ಯವಹಾರ ನಿಕಾಯದ ಡೀನ್​ ಪ್ರೊ.ಪಾಂಡುರಂಗ ಪತ್ತಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಮೋತಿಲಾಲ್​ ಓಸ್ವಾಲ್​ ಸಂಸ್ಥೆಯ ನಾಗೇಂದ್ರ ಎನ್​.ವಿ. ಮತ್ತು ಬಾಲಾಜಿ ಹಾಗೂ ಮುಂಬೈ ಅರಿಹಂತ್​ ಕ್ಯಾಪಿಟಲ್​ನ ಅನಿತಾ ಗಾಂಧಿ ಅವರು ವಿವಿಧ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ಪ್ರೊ.ಎ.ಎನ್​. ವಿಜಯಕುಮಾರ ಪ್ರಾಸ್ತಾವಿಕ ಮಾತನಾಡಿ, ಎಂಬಿಎ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಮತ್ತು ಹೊರಗೆ ತೊಡಗಿಸಿಕೊಳ್ಳಲು ಹಣಕಾಸು ಕ್ಲಬ್​ ಪರಿಕಲ್ಪನೆ ಮಾಡಲಾಗಿದೆ. ಇದು ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ಮತ್ತು ವಿದ್ಯಾರ್ಥಿಗಳ ವೇದಿಕೆಯಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಉದ್ಯಮ ಸಿದ್ಧ ಕೌಶಲ ಒದಗಿಸುವ ಗುರಿ ಹೊಂದಿದೆ. ಈ ವಿಚಾರ ಸಂಕಿರಣ ಕ್ಲಬ್​ ಅಡಿ ಆಯೋಜಿಸಿದ ಮೊದಲ ಕಾರ್ಯಕ್ರಮ ಎಂದು ತಿಳಿಸಿದರು.
ಪ್ರೊ.ದೇವರಾಜಪ್ಪ, ಡಾ.ಗಣಪತಿ ಸಿನ್ನೂರ, ಡಾ.ಶಿವಕುಮಾರ ಬೆಳ್ಳಿ, ಡಾ.ರಂಗನಾಥ, ಡಾ.ಸಫಿಯಾ ಪರ್ವೀನ್​, ಡಾ.ಸುಷ್ಮಾ, ಡಾ.ಸುಜಾತಾ, ಡಾ.ಬಸವರಾಜ ಎಸ್​., ಡಾ.ರಾಜಲಿಂಗಂ, ಡಾ.ರಾವೇಂದ್ರ ಬೋನಾಳ, ಲಕ್ಷಿ$್ಮಕಾಂತ ಮಾಲ್ಜಿ, ಮೌನೇಶ ಇತರರಿದ್ದರು. ಎಂಬಿಎ ವಿದ್ಯಾರ್ಥಿಗಳಾದ ಸುಪ್ರಿಯಾ ಮತ್ತು ಸಾಹಿಲ್​ ಶೇಖ ನಿರೂಪಣೆ ಮಾಡಿದರು. ವಿಭಾಗದ ಮುಖ್ಯಸ್ಥ ಡಾ.ಜೋಹೇರ್​ ಸ್ವಾಗತಿಸಿದರು, ಡಾ.ಶೈಲಜಾ ಕೊನೇಕ್​ ವಂದಿಸಿದರು. ಡಾ.ಶ್ರೀಲಕ್ಷಿ$್ಮ ಅತಿಥಿ ಪರಿಚಯ ಮಾಡಿದರು.
"

ಹಣಕಾಸು ವಲಯವು ಹಲವು ಅವಕಾಶಗಳನ್ನು ಹೊಂದಿದೆ. ನೀವು ಹೂಡಿಕೆ, ಬ್ಯಾಂಕರ್​, ಹಣಕಾಸು, ಮ್ಯೂಚುವಲ್​ ಫಂಡ್​ ಮತ್ತು ವಿಮಾ ಸಲಹೆಗಾರರು ಆಗಬಹುದು. ಹಣಕಾಸು ವಲಯದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಬಗ್ಗೆ ತಿಳಿದುಕೊಳ್ಳಲು ಈ ವಿಚಾರ ಸಂಕಿರಣದ ಸದ್ಬಳಕೆ ಮಾಡಿಕೊಳ್ಳಬೇಕು.>

ಡಾ.ಪಾಂಡುರಂಗ ಪತ್ತಿಡೀನ್​,

ವ್ಯವಹಾರ ನಿಕಾಯ ಸಿಯುಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net