ಆರೋಗ್ಯಕರ ಜೀವನಕ್ಕೆ ಯೋಗವೇ ಆಧಾರ

ಶಹಾಪುರದ ಎಸ್​ಎಂಸಿ ಜೈನ್​ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ಸಪ್ತಾಹ ಶಿಬಿರದ ಸಮಾರೋಪದಲ್ಲಿ ನರಸಿಂಹ ವೈದ್ಯ, ಡಾ.ಇಂದಿರಾ ಉಪ್ಪಿನ್​, ಮಾಂಗಿಲಾಲ್​ ಜೈನ್​, ಶಿವಕುಮಾರ, ವೀರೇಶ ಇತರರಿದ್ದರು.
ಶಹಾಪುರದ ಎಸ್​ಎಂಸಿ ಜೈನ್​ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ಸಪ್ತಾಹ ಶಿಬಿರದ ಸಮಾರೋಪದಲ್ಲಿ ನರಸಿಂಹ ವೈದ್ಯ, ಡಾ.ಇಂದಿರಾ ಉಪ್ಪಿನ್​, ಮಾಂಗಿಲಾಲ್​ ಜೈನ್​, ಶಿವಕುಮಾರ, ವೀರೇಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಗಾಚಾರ್ಯ ನರಸಿಂಹ ವೈದ್ಯ ಅಭಿಮತ
  • 7 ದಿನಗಳ ಯೋಗ ಸಪ್ತಾಹ ಶಿಬಿರದ ಸಮಾರೋಪ
ಶಹಾಪುರ: ಇಲ್ಲಿನ ಆರ್​ಎಸ್​ಜೆಇ ಟ್ರಸ್ಟ್​ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್​ಎಂಸಿ ಜೈನ್​ ಸಿಬಿಎಸ್​ಇ ಶಾಲೆಯಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ಹಮ್ಮಿಕೊಂಡ 7 ದಿನಗಳ ಯೋಗ ಸಪ್ತಾಹ ಶಿಬಿರದ ಸಮಾರೋಪ ಹಾಗೂ ವಿಶ್ವ ಯೋಗ ದಿನವನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಆರಂಭದಲ್ಲಿ ವಿದ್ಯಾರ್ಥಿಗಳು ಯೋಗ ಪ್ರಾರ್ಥನೆ ಹಾಗೂ ವಿವಿಧ ಯೋಗಾಸನಗಳ ಪ್ರದರ್ಶನ ಮಾಡುವ ಮೂಲಕ ಯೋಗದ ಮಹತ್ವವನ್ನು ಅನಾವರಣಗೊಳಿಸಿದರು. ಕಳೆದ ಏಳು ದಿನಗಳಿಂದ ನಡೆದ ಯೋಗ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ, ತಾಡಾಸನ, ವೃಾಸನ, ಭುಜಂಗಾಸನ ಸೇರಿ ಹಲವು ಆಸನಗಳು ಹಾಗೂ ಪ್ರಾಣಾಯಾಮಗಳ ತರಬೇತಿ ಪಡೆದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೋಗಾಚಾರ್ಯ ನರಸಿಂಹ ವೈದ್ಯ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿ, ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಅದು ಮನಸ್ಸು, ದೇಹ ಮತ್ತು ಆತ್ಮದ ಸಮತೋಲನವನ್ನು ಕಾಪಾಡುವ ಜೀವನ ಪದ್ಧತಿಯಾಗಿದೆ ಎಂದು ತಿಳಿಸಿದರು.
ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು. ಅಧ್ಯ ಮಾಂಗಿಲಾಲ್​ ಜೈನ್​ ಅಧ್ಯತೆ ವಹಿಸಿ ಮಾತನಾಡಿದರು. ಆನಂದ ಜೈನ್​, ಪ್ರಾರ್ಚಾಯ ಶಿವಕುಮಾರ ಡಿ.ಮಾತನಾಡಿದರು.
ಯೋಗ ತರಬೇತಿದಾರ ವೀರೇಶ ಎಸ್​. ಉಳ್ಳಿ ಅವರು ಕಳೆದ ಏಳು ದಿನಗಳ ಶಿಬಿರದ ಕುರಿತು ಮಾಹಿತಿ ನೀಡಿದರು. ಕೊನೆಯಲ್ಲಿ 7 ದಿನಗಳ ಯೋಗ ಸಪ್ತಾಹ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಶಿಕರಿಗೆ ಪ್ರಮಾಣಪತ್ರ ವಿತರಿಸಿ ಗೌರವಿಸಲಾಯಿತು.
ಈ ವೇಳೆ ಶ್ರೀಕಾಂತ ಜೈನ್​, ಪ್ರಶಾಂತ ಕುಲಕರ್ಣಿ, ಅಯ್ಯಣ್ಣ, ಯಂಕಪ್ಪ, ಅನ್ನಪೂರ್ಣ, ಶೀಲಾ, ಶ್ರುತಿ, ಶಿವಲೀಲಾ, ಜ್ಯೋತಿ ಕೆ., ಈರಮ್ಮ ಇತರರಿದ್ದರು.
ಮೊಬೈಲ್​ ಬಳಕೆ ಕಡಿಮೆ ಮಾಡಿ
ಇಂದಿನ ಒತ್ತಡದ ಜೀವನದಲ್ಲಿ ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಸಾಧನವಾಗಿದೆ. ವಿದ್ಯಾರ್ಥಿಗಳು ಮೊಬೈಲ್​ ಹಾಗೂ ಡಿಜಿಟಲ್​ ಸಾಧನಗಳ ಬಳಕೆ ಕಡಿಮೆ ಮಾಡಿ, ಪ್ರತಿದಿನ ಯೋಗ ಮತ್ತು ಧ್ಯಾನಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದು ಅತಿಥಿ ಉಪನ್ಯಾಸಕಿ ಡಾ.ಇಂದಿರಾ ಉಪ್ಪಿನ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net