ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ / DODABALLAPUR

ದೊಡ್ಡಬಳ್ಳಾಪುರದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಶ್ರೀ ಪತಂಜಲಿ ಯೋಗ, ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಶಿಕ್ಷಕ ಎನ್​. ವೆಂಕಟೇಶ್​ ಚಾಲನೆ ನೀಡಿದರು. ಯೋಗ ಶಿಕ್ಷಕರಾದ ಎಸ್​.ಎ.ಶೈಲಜಾ, ಶಿವರಾಜಮ್ಮ ಇತರರು ಇದ್ದರು.
ದೊಡ್ಡಬಳ್ಳಾಪುರದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಶ್ರೀ ಪತಂಜಲಿ ಯೋಗ, ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಶಿಕ್ಷಕ ಎನ್​. ವೆಂಕಟೇಶ್​ ಚಾಲನೆ ನೀಡಿದರು. ಯೋಗ ಶಿಕ್ಷಕರಾದ ಎಸ್​.ಎ.ಶೈಲಜಾ, ಶಿವರಾಜಮ್ಮ ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸುವ ಪ್ರಾಚಿನ ಭಾರತದ ಜೀವನ ಕ್ರಮವಾಗಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ಶಿಕ್ಷಕ ಎನ್​.ವೆಂಕಟೇಶ್​ ಹೇಳಿದರು.
ನಗರದ ಮುಖ್ಯರಸ್ತೆಯ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಹಮ್ಮಿಕೊಂಡಿರುವ 21 ದಿನಗಳ ಮಕ್ಕಳ ಉಚಿತ ವಸಂತ ಯೋಗ ಮತ್ತು ವ್ಯಕ್ತಿತ್ವವಿಕಸನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಯೋಗ ಪತಂಜಲಿ ಮಹರ್ಷಿಗಳಿಂದ ಪ್ರತಿಪಾದಿತವಾದ ಆಸನ. ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಮನಸ್ಸಿನ ಶಾಂತಿ ಹಾಗೂ ದೇಹದ ಸದೃಢತೆಯನ್ನು ಸಾಧಿಸುವ ಮಾರ್ಗವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಈ ದಿಸೆಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಯೋಗ ಕಲಿಸಿಕೊಡಲಾಗುತ್ತಿದೆ. ಚಿಕ್ಕಂದಿನಿಂದಲೇ ನಮ್ಮ ಸಂಸತಿ, ಪರಂಪರೆಗಳನ್ನು ಪರಿಚಯಿಸುವುದು ಮುಖ್ಯವಾಗಿದ್ದು, ಯೋಗದ ಜತೆಗೆ ಸಂಸ್ಕಾರ ಕಲಿಯುವುದು ಸಹ ಮುಖ್ಯವಾಗಿದೆ ಎಂದರು.
ತಾಲೂಕು ಕಸಾಪಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿ, ಯಾವುದೇ ಕೆಲಸಕ್ಕೆ ನಾವು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದರೆ ಗುರಿ ಮುಟ್ಟಲು ಸಾಧ್ಯ. ಆದರೆ, ಮಕ್ಕಳು ದೈಹಿಕ ಚಟುವಟಿಕೆ ಇಲ್ಲದೇ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ದಿಸೆಯಲ್ಲಿ ಮಕ್ಕಳಿಗೆ ಯೋಗ, ಧ್ಯಾನ, ಸಾಂಸತಿಕ ಚಟುವಟಿಕೆಗಳನ್ನು ಕಲಿಸುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸಬೇಕಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net