ಯಶಿಕಾಗೆ ಯೋಗ ಎಕ್ಸಲೆನ್ಸ್​ ಗರಿ Yoga Excellence Award

ಯಶಿಕಾಗೆ ಯೋಗ ಎಕ್ಸಲೆನ್ಸ್​ ಗರಿ Yoga Excellence Award
ಯಶಿಕಾಗೆ ಯೋಗ ಎಕ್ಸಲೆನ್ಸ್​ ಗರಿ Yoga Excellence Award
Published on
ಚಿಂತಾಮಣಿ: ತಾಲೂಕಿನ ಕುರುಬೂರಿನ ನವೋದಯ ವಿದ್ಯಾ ಮಂದಿರ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ, 14 ವರ್ಷದ ಕೆ.ಯಶಿಕಾ ಬಂಧಿತಾ ಭಾರತೀಯ ಯೋಗ ಎಕ್ಸಲೆನ್ಸ್​ ಪ್ರಶಸ್ತಿ 2026ಕ್ಕೆ ಭಾಜನರಾಗಿ ಜಾಗತಿಕಮಟ್ಟದಲ್ಲಿ ತಾಲೂಕಿನ ಕೀರ್ತಿ ತಂದಿದ್ದಾರೆ.Yoga Excellence Award

ಯೋಗ ದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದ್ದು, ಯೋಗ ಕ್ಷೇತ್ರದಲ್ಲಿ ಯಶಿಕಾ ನಿರಂತರ ಅಭ್ಯಾಸ ಹಾಗೂ ಯೋಗದ ಪ್ರಚಾರಕ್ಕಾಗಿ ಮಾಡಿದ ಗಣನೀಯ ಸಾಧನೆ ಗುರುತಿಸಿ ಗೌರವ ಸಂದಿದೆ.ಚಿಕ್ಕ ವಯಸ್ಸಿನಲ್ಲೇ ಯೋಗದ ಕಠಿಣ ಆಸನಗಳನ್ನು ಸಹಜವಾಗಿ ಪ್ರದರ್ಶಿಸುವ ಪ್ರತಿಭೆ ಹೊಂದಿರುವ ಯಶಿಕಾ, ಶಾಲಾಮಟ್ಟದಿಂದ ಹಿಡಿದು ವಿವಿಧ ಹಂತಗಳಲ್ಲಿ ಯೋಗದ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಯಶಿಕಾ ಬಂಧಿತಾಗೆ ಶಾಲಾ ಆಡಳಿತ ಮಂಡಳಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net