ಯಶವಂತರಾಯಗೌಡರ ನಾಟಕೀಯ ರಾಜೀನಾಮೆ

ಇಂಡಿಯ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಮಾತನಾಡಿದರು. ಬಾಳು ಮುಳಜಿ, ಮಹೇಶ ಹೂಗಾರ, ಸಂತೋಷ ಪಾಟೀಲ, ಪ್ರಶಾಂತ ಗವಳಿ, ಸಂತೋಷ ಪಾಟೀಲ, ಭೀಮರಾಯ ಬಬಲಾದ, ರಾಜಶೇಖರ ಭತಗುಣ ಮತ್ತಿತರರಿದ್ದರು.
ಇಂಡಿಯ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಮಾತನಾಡಿದರು. ಬಾಳು ಮುಳಜಿ, ಮಹೇಶ ಹೂಗಾರ, ಸಂತೋಷ ಪಾಟೀಲ, ಪ್ರಶಾಂತ ಗವಳಿ, ಸಂತೋಷ ಪಾಟೀಲ, ಭೀಮರಾಯ ಬಬಲಾದ, ರಾಜಶೇಖರ ಭತಗುಣ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ವ್ಯಂಗ್ಯ
ಇಂಡಿ:

ಶಾಸಕ ಯಶವಂತರಾಯಗೌಡ ಪಾಟೀಲರು ನಾನು ಬದ್ಧತೆಯ ಸಿದ್ಧಾಂತದ ರಾಜಕಾರಣಿ ಎಂದು ಹೇಳುತ್ತಾರೆ. ಈಗ ಅತೃಪ್ತರಾಗಿ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೆ ಮೂರು ದಿನಗಳ ನಂತರ ರಾಜೀನಾಮೆ ಹಿಂದೆ ಪಡೆದಿದ್ದೇನೆ ಎಂದು ನಾಟಕ ಮಾಡಬಾರದು ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ವ್ಯಂಗ್ಯ ಮಾಡಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ವಂಚನೆ ಆಗಿದ್ದರೆ ರಾಜೀನಾಮೆ ನೀಡಲಿ ಆದರೆ ಅಧಿಕಾರಬೇಕೆಂದು ರಾಜೀನಾಮೆ ನೀಡಿರುವುದು ಅವರಿಗೆ ಶೋಭೆ ತರುವಂಥದ್ದಲ್ಲ. ಈಗಾಗಲೇ ಅವರು ರಾಜೀನಾಮೆ ನೀಡಿದ್ದು ಅದಕ್ಕೆ ಕಾರ್ಯಕರ್ತರ ಮತಕ್ಷೇತ್ರದ ಜನರ ಅಭಿಪ್ರಾಯ ಕೇಳಿಲ್ಲ. ನಾಳೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮತಕ್ಷೇತ್ರದ ಜನರಿಗೆ ತಲೆಬಾಗಿ ರಾಜೀನಾಮೆ ಮರಳಿ ಪಡೆಯುತ್ತೇನೆ ಎಂದು ನಾಟಕವಾಡುತ್ತಾರೆ ಎಂದು ಲೇವಡಿ ಮಾಡಿದರು.
ತಾಲೂಕು ಮಳೆ ಇಲ್ಲದೆ ಬರದಿಂದ ತತ್ತರಿಸುತ್ತಿದೆ, ಕುಡಿಯುವ ನೀರಿನ ತೊಂದರೆ ಆಗುತ್ತಿದೆ. ಈ
ಸಮಯದಲ್ಲಿ ರಾಜೀನಾಮೆ ಎಂಬ ನಾಟಕ ಎಷ್ಟು ಸರಿ, ಹಿರಿಯ ಶಾಸಕರು ಮೂರು ಬಾರಿ ಜನರು ಆಯ್ಕೆ ಮಾಡಿದ್ದು ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದರು.
ಕಳೆದ ಮೂರು ತಿಂಗಳಿಂದ ಸಚಿವ ಸ್ಥಾನಕ್ಕಾಗಿ ಬೆಂಗಳೂರು ದೆಹಲಿ ಅಡ್ಡಾಡುತ್ತಿದ್ದಾರೆ. ಗ್ರಾಮಗಳ ಕಡೆಗೆ ಗಮನವೇ ಹರಿಸಿಲ್ಲ, ಆಡಳಿತ ಕುಸಿದು ಬಿದ್ದಿದೆ. ಕಳೆದ ಬಾರಿ ಚುನಾವಣೆಯಲ್ಲಿ ತಾಲೂಕನ್ನು ಜಿಲ್ಲೆ ಮಾಡುತ್ತೇನೆಂದು ನಂಬಿಸಿ ಮೋಸ ಮಾಡಿದರು. ಈಗ ರಾಜೀನಾಮೆಯ ನಾಟಕವಾಡುತ್ತಿದ್ದಾರೆ. ಸ್ವಾರ್ಥದಿಂದ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ರೋಡಗಿ, ಖೇಡಗಿ ಹಾಗೂ ಭುಯ್ಯರ ಗ್ರಾಮಗಳ ಜನರಿಗೆ ಕುಡಿಯಲು ಹಾಗೂ ದೈನಂದಿನ ಬಳಕೆಗೆ ಕನಿಷ್ಠ ನೀರು ಕೂಡ ಸಿಗುತ್ತಿಲ್ಲ. ಅಂತಹ ಗಂಭೀರ ಪರಿಸ್ಥಿತಿಯಲ್ಲೂ ಶಾಸಕರು ಜನರ ಸಂಕಷ್ಟ ಆಲಿಸದೆ ಸ್ವಾರ್ಥ ರಾಜಕೀಯಕ್ಕಾಗಿ ಓಡಾತ್ತಿರುವುದು ನಮ್ಮ ಭಾಗದ ಜನರ ದುರ್ದೈವ ಎಂದರು.
ರಾಜೀನಾಮೆ ಕೈ ಬರಹದ ಮೂಲಕ ಸ್ಪೀಕರ್‌ಗೆ ಸಲ್ಲಿಸಬೇಕು. ಟೈಪ್ ಮಾಡಿದ ಪತ್ರ ಸಮಂಜಸವಲ್ಲ. ಕುರ್ಚಿ ಆಸೆಗಾಗಿ ರಾಜೀನಾಮೆ ನೀಡಿದ್ದೀರಿ ಅದನ್ನು ಮರಳಿ ಪಡೆಯಬಾರದು. ತತ್ವ ಸಿದ್ಧಾಂತ ಬದ್ಧತೆಯ ಮಾತುಗಳು ಕೇವಲ ಬಾಯಿಯಿಂದ ಬರಬಾರದು ಆಚರಣೆಯಲ್ಲಿ ಇರಬೇಕು ಎಂದರು.
ಕಾಸುಗೌಡ ಬಿರಾದಾರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ರವಿ ವಗ್ಗೆ ದೇವೇಂದ್ರ ಕುಂಬಾರ ಮಾತನಾಡಿದರು. ಬಾಳು ಮುಳಜಿ, ಮಹೇಶ ಹೂಗಾರ, ಸಂತೋಷ ಪಾಟೀಲ, ಪ್ರಶಾಂತ ಗವಳಿ, ಸಂತೋಷ ಪಾಟೀಲ, ಭೀಮರಾಯ ಬಬಲಾದ, ರಾಜಶೇಖರ ಭತಗುಣಕಿ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net