

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕಥೆ,ಕಾದಂಬರಿ,ಕವನ,ನಾಟಕ,ಪ್ರಬಂಧ ಹೀಗೆವಿವಿಧ ಸಾಹಿತ್ಯ ಪ್ರಕಾರಗಳಿಂದಪರಿಚಿತರಾಗಿದ್ದ ಹಿರಿಯ ಸಾಹಿತಿಬಿ. ಸಿದ್ಧಲಿಂಗಸ್ವಾಮಿ(ಬಿ.ಎಸ್.ಸ್ವಾಮಿ)ಶನಿವಾರನಿಧನರಾಗಿದ್ದಾರೆ.
84 ವರ್ಷವಯಸ್ಸಿನ ಬಿ.ಎಸ್.ಸ್ವಾಮಿಓರ್ವ ಪುತ್ರಿ ಮತ್ತು ಪುತ್ರನನ್ನುಅಗಲಿದ್ದು, ಪುತ್ರವಿದೇಶದಲ್ಲಿರುವುದರಿಂದ ಅವರುಬಂದ ನಂತರ ಮಾ.2ಸೋಮವಾರ ಮಧ್ಯಾಹ್ನ12ಕ್ಕೆಮಾಗಡಿ ರಸ್ತೆಯಲ್ಲಿರುವ ಕನ್ನಳ್ಳಿರುದ್ರಭೂಮಿಯಲ್ಲಿ ಅಂತ್ಯಕ್ರಿಯೆನಡೆಸಲಾಗುವುದು ಎಂದು ಕುಟುಂಬಸದಸ್ಯರು ತಿಳಿಸಿದ್ದಾರೆ.ಭಾನುವಾರ ಹಂಪಿನಗರದಆರ್‌ಪಿಸಿ ಲೇಔಟ್‌ನಲ್ಲಿರುವಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆಇಡಲಾಗಿದೆ.
1942ರಸೆಪ್ಟಂಬರ್ 8ರಂದು ಚಾಮರಾಜನಗರಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಮಧುವನಹಳ್ಳಿಯಲ್ಲಿ ಹುಟ್ಟಿದ್ದಸ್ವಾಮಿಯವರು ಪ್ರಾಥಮಿಕ ಶಿಕ್ಷಣವನ್ನುಹುಟ್ಟೂರಿನಲ್ಲಿ ಮಾಡಿ ನಂತರಮೈಸೂರಿನ ಸೇಂಟ್ ಫಿಲೋಮಿನಕಾಲೇಜಿನಿಂದ ಬಿ.ಎಸ್ಸಿ.ಪದವಿ ಮತ್ತುಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದಎಂ.ಎ.ಪದವಿ ಪಡೆದಿದ್ದಅವರು ಮಲೆಮಹದೇಶ್ವರ ಒಂದು ಅಧ್ಯಯನಎಂಬ ಪ್ರೌಢ ಪ್ರಬಂಧ ರಚಿಸಿ ಮೈಸೂರುವಿಶ್ವವಿದ್ಯಾಲಯದಿಂದ ಪಿಎಚ್.ಡಿ.ಪದವಿ ಪಡೆದರು.
ಆಕಾಶವಾಣಿಯಲ್ಲಿಕಾರ್ಯಕ್ರಮ ನಿರ್ವಾಹಕರಾಗಿದ್ದಸ್ವಾಮಿಯವರದ್ದು ಬಹುಮುಖವ್ಯಕ್ತಿತ್ವ.ಕವನ,ಕಾವ್ಯ,ಮಹಾಕಾವ್ಯ,ಜೀವನ ಚರಿತ್ರೆ,ಶರಣ ಸಾಹಿತ್ಯ,ಜೈನ ಸಾಹಿತ್ಯ,ಪ್ರವಾಸ ಕಥನ,ಜಾನಪದ ಸಾಹಿತ್ಯ,ಮಕ್ಕಳ ಸಾಹಿತ್ಯ,ಲೇಖನ,ನಾಟಕ ಹೀಗೆ ಹಲವುಸಾಹಿತ್ಯ ಪ್ರಕಾರಗಳನ್ನು ರಚಿಸಿವಿವಿಧ ಪ್ರಶಸ್ತಿ,ಗೌರವಗಳಿಗೆಭಾಜನರಾಗಿದ್ದರು.